ಸನ್ಮಾರ್ಗ ವಾರ್ತೆ
ಮಕ್ಕ ಮತ್ತು ಮದೀನ ಹರಮ್ ಗಳನ್ನು ಪ್ರವೇಶಿಸುವ ಯಾತ್ರಿಕರು ಫ್ಲು ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಮತ್ತು ಮಾಸ್ಕ್ ಧರಿಸಬೇಕು ಎಂದು ಸೌದಿ ಅರೇಬಿಯಾ ನಿರ್ದೇಶನ ನೀಡಿದೆ. ವಾತಾವರಣದಲ್ಲಿ ಬದಲಾವಣೆ ಆಗಿರುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗಿದ್ದು ಈ ಹಿನ್ನೆಲೆಯಲ್ಲಿ ಈ ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಉಮ್ರಾ ವಿಸಾ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಉಮ್ರ ವಿಸಾ ಇಶ್ಯೂ ಮಾಡಿ 30 ದಿನಗಳ ಒಳಗೆ ಯಾತ್ರಾರ್ತಿಗಳು ಸೌದಿ ಅರೇಬಿಯಾ ಪ್ರವೇಶಿಸದಿದ್ದರೆ ವಿಸಾ ರದ್ದಾಗಲಿದೆ. ಇದೇ ವೇಳೆ ಸೌದಿ ಅರೇಬಿಯಾ ಪ್ರವೇಶಿಸಿದ ಬಳಿಕ ಮೂರು ತಿಂಗಳ ಕಾಲ ಇರಬಹುದು.
ಈ ಮೊದಲಿನ ನಿಯಮದ ಪ್ರಕಾರ ಉಮ್ರ ವಿಸಾ ಇಶ್ಯೂ ಮಾಡಿದ ಬಳಿಕ 3 ತಿಂಗಳಲ್ಲಿ ಅದನ್ನು ಉಪಯೋಗಿಸಿದರೆ ಸಾಕಾಗುತ್ತಿತ್ತು. ಮುಂದಿನ ವಾರದಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.
ಮಕ್ಕ ಮತ್ತು ಮದೀನಾದಲ್ಲಿ ಬಿಸಿಲು ನಿಧಾನಕ್ಕೆ ತೆರೆಮರೆಗೆ ಸರಿಯುತ್ತಿದ್ದು ಚಳಿ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಯಾತ್ರಿಕರ ನಿರೀಕ್ಷೆ ಮಾಡಲಾಗಿದೆ.
ಜೂನ್ ತಿಂಗಳಲ್ಲಿ ಹೊಸ ಉಂಮ್ರ ಸೀಸನ್ ಆರಂಭವಾದ ಬಳಿಕ ವಿದೇಶಿ ಯಾತ್ರಿಕರಿಗೆ ನೀಡಿದ ಉಮ್ರಾ ವೀಸಾ ಸಂಖ್ಯೆ 40 ಲಕ್ಷವನ್ನು ದಾಟಿದೆ.. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಸುರಕ್ಷತೆಯನ್ನು ಕೂಡ ಕಾಪಾಡಿಕೊಳ್ಳಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












