ವಂದೇ ಮಾತರಂ ಹಾಡಲು ಬಲವಂತ ಪಡಿಸಬೇಡಿ: ಮುತ್ತಹಿದ ಮಜಿಲಿಸೆ ಉಲಮಾ

0
393

ಸನ್ಮಾರ್ಗ ವಾರ್ತೆ

ವಂದೇ ಮಾತರಂ ಹಾಡುವುದು ಇಸ್ಲಾಮ್ ರೋಧಿಯಾಗಿದ್ದು ಇಸ್ಲಾಮಿನ ಮೂಲಭೂತ ತತ್ವವಾದ ದೇವನು ಒಬ್ಬನೇ ಎಂಬ ನಿಲುವಿನೊಂದಿಗೆ ಘರ್ಷಿಸುತ್ತದೆ ಎಂದು ಶ್ರೀನಗರದ ಪ್ರಮುಖ ಮುಸ್ಲಿಂ ಸಂಘಟನೆಯಾದ ಮುತ್ತಹಿದ ಮಜಿಲಿಸೆ ಉಲಮ ಹೇಳಿದೆ. ಮೀರ್ ವೈಸ್ ಉಮರ್ ಫಾರೂಕ್ ಅವರು ಇದರ ಅಧ್ಯಕ್ಷರಾಗಿದ್ದಾರೆ ವಂದೇ ಮಾತರಂ ಹಾಡಿಗೆ 150 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ನವಂಬರ್ 7ರಂದು ಎಲ್ಲಾ ಶಾಲೆಗಳಲ್ಲೂ ವಂದೇ ಮಾತರಂ ಕುರಿತಾದ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಬೇಕು ಎಂದು ಜಮ್ಮು ಕಾಶ್ಮೀರ ಸರಕಾರ ಸುತ್ತೋಲೆಯಲ್ಲಿ ಹೇಳಿರುವುದಕ್ಕೆ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸೃಷ್ಟಿಕರ್ತನ ಹೊರತಾಗಿ ಇನ್ನಾರನ್ನೂ ಆರಾಧಿಸುವುದಕ್ಕೆ ಇಸ್ಲಾಂ ಅನುಮತಿಸುವುದಿಲ್ಲ ಎಂದು ಸಂಘಟನೆ ಹೇಳಿದೆ.

ಸರ್ಕಾರ ಕೂಡಲೇ ಈ ಸುತ್ತೋಲೆಯನ್ನು ಹಿಂಪಡೆಯಬೇಕು. ಈ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹ ಮತ್ತು ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಗಂಭೀರವಾಗಿ ಆಲೋಚಿಸಬೇಕು. ಮುಸ್ಲಿಮರ ನಂಬಿಕೆ ಯೊಂದಿಗೆ ಘರ್ಷಿಸುವ ಆರಾಧನೆಯನ್ನು ಮಾಡುವಂತೆ ವಿದ್ಯಾರ್ಥಿಗಳನ್ನು ಬಲವಂತ ಪಡಿಸಬಾರದು ಎಂದು ಅವರು ಸಂಘಟನೆ ಹೇಳಿದೆ.

ಕೇಂದ್ರ ಸಚಿವ ಸಂಪುಟವು ವಂದೇ ಮಾತರಂನ 150 ನೇ ವರ್ಷವನ್ನು ದೇಶಾದ್ಯಂತ ಆಚರಿಸಲು ಅಕ್ಟೋಬರ್ ಒಂದರಂದು ನಿರ್ಧರಿಸಿತ್ತು.

ಈ ಸುತ್ತೊಲೆಯು ಆರ್ ಎಸ್ ಎಸ್ ಪ್ರಣಿತ ಹಿಂದುತ್ವ ಐಡಿಯಾಲಜಿಯನ್ನು ಮುಸ್ಲಿಂ ಬಹುಸಂಖ್ಯಾತ ಪ್ರದೇಶದ ಮೇಲೆ ಹೇರುವ ಸಂಚಿನಂತೆ ಕಾಣಿಸುತ್ತಿದೆ. ಇದು ಭಾರತದ ಏಕತೆಯನ್ನು ಮತ್ತು ವೈವಿಧ್ಯತೆಯನ್ನು ಉದ್ದೇಶವಾಗಿಟ್ಟುಕೊಂಡು ಮಾಡಲಾದ ನಿರ್ಧಾರ ಅಲ್ಲ ಎಂದು ಸಂಘಟನೆ ತಿಳಿಸಿದೆ.