ಹೊಸದಿಲ್ಲಿ, ಜೂ. 25: ಲೋಕಸಭೆಯ ಚುನಾವಣೆಯಲ್ಲಾದ ಭಾರೀ ಸೋಲಿನ ಬಳಿಕ ಕಾಂಗ್ರೆಸ್ ತಮ್ಮ ವಕ್ತಾರರನ್ನು ಯಾವುದೇ ಟಿವಿ ಚ್ಯಾನೆಲ್ಗಳಲ್ಲಿ ಭಾಗವಹಿಸದಂತೆ ತಡೆಹಿಡಿದ್ದು, ಒಂದು ತಿಂಗಳಿಗೆ ಇದ್ದ ಆದೇಶ ಮಂಗಳವಾರಕ್ಕೆ ಮುಗಿಯುತ್ತದೆ. ಆದರೆ ಈ ನಿಷೇಧವನ್ನು ಕಾಂಗ್ರೆಸ್ ಪುನಃ ಮುಂದುವರಿಸಲು ಬಯಸುತ್ತಿದೆ ಎನ್ನುವ ಸೂಚನೆಗಳು ಲಭ್ಯವಾಗಿದೆ.
ಮುಂದಿನ ಸೂಚನೆ ಸಿಗುವವರೆಗೂ ಟಿವಿ ಚ್ಯಾನೆಲ್ನಿಂದ ದೂರವಿರಬೇಕೆಂದು ಕಾಂಗ್ರೆಸ್ ತಮ್ಮ ವಕ್ತಾರರಿಗೆ ತಿಳಿಸಿದೆ. ಕಾಂಗ್ರೆಸ್ ಈ ಕುರಿತು ಸ್ಪಷ್ಟ ನಿರ್ಧಾರ ತಳೆಯಲಿದ್ದು, ಈ ನಿರ್ಧಾರ ಪ್ರಕಟವಾದ ನಂತರ ವಕ್ತಾರರಿಗೆ ಟಿವಿ ಚ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಆದರೆ ಈಗ ಟಿವಿ ಚರ್ಚೆಯಲ್ಲಿ ಮುಂದಿನ ಆದೇಶ ಬರುವವರೆಗೆ ಕಾಂಗ್ರೆಸ್ ವಕ್ತಾರರು ಭಾಗವಹಿಸುವಂತಿಲ್ಲ ಎಂದು ಪಾರ್ಟಿ ಕಟ್ಟಾಜ್ಞೆ ವಿಧಿಸಿದೆ.












