ಜಗತ್ತಿನಾದ್ಯಂತ ಕುಡಿಯುವ ನೀರಿನ ಸಂಕಷ್ಟ: ಚೆನ್ನೈ ನಂಬರ್ 1

0
727

ಹೊಸದಿಲ್ಲಿ, ಜೂ. 25: ಭಾರತ ಹಲವು ವರ್ಷಗಳಿಂದ ತೀವ್ರ ನೀರಿನ ಬರವನ್ನು ಅನುಭವಿಸುತ್ತಿದೆ. ಜಲಾಶಯಗಳಲ್ಲಿ ನೀರು ಬತ್ತಿ ಹೋಗಿವೆ. ಹೀಗೆಯೇ ಮುಂದುವರಿದರೆ ಒಂದು ಬಿಂದು ನೀರಿಗೂ ಜನರು ಚಡಪಡಿಸುವ ದಿನಗಳು ದೂರವಿರಲಾರದು. ತಮಿಳ್ನಾಡಿನ ರಾಜಧಾನಿ ಚೆನ್ನೈಯಲ್ಲಿ ನೀರಿನ ಅಭಾವ ಅತೀ ತೀವ್ರವಾಗಿದೆ.

ನೀರಿಲ್ಲದ್ದರಿಂದ ಹಲವು ಕಂಪೆನಿಗಳು ಕಚೇರಿಗೆ ಬರುವುದು ಎಂದು ತಮ್ಮ ಸಿಬ್ಬಂದಿಗಳಿಗೆ ಹೇಳುತ್ತಿವೆ. ಡಬ್ಲ್ಯೂ ಡಬ್ಲ್ಯೂ ಎಫ್ ಗ್ಲೋಬಲ್ ವಾಟರ್ ಸ್ಟೀವರ್ಡಶಿಪ್ ಲೀಡ್‍ನ ಎಲೆಕ್ಸಿಸ್ ಮಾರ್ಗನ್ ಜಗತ್ತಿನ ಹಲವು ನಗರಗಳು ನೀರಿನ ಕೊರತೆಯಿಂದ ಬಳಲುತ್ತಿವೆ. ಇದರಲ್ಲಿ ಭಾರತದ ಚೆನ್ನೈ ನಂಬರ್ ಒಂದನೇ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ. ವರದಿಯಾಗಿರುವ ಪ್ರಕಾರ ಚೆನ್ನೈ ಅತೀ ತೀವ್ರ ಜಲಕ್ಷಾಮ ಇರುವ ನಗರವಾಗಿದೆ. ಕೊಲ್ಕತಾ ಎರಡನೆ ಸ್ಥಾನದಲ್ಲಿ ಮತ್ತು ಮೂರನೆ ಸ್ಥಾನ ಟರ್ಕಿಯ ಇಸ್ತಾಂಬುಲ್ ಹೊಂದಿದೆ. ನಂತರ ದಿಲ್ಲಿಯ ಮೇಲೆಯೂ ಇದೇ ಸ್ಥಿತಿ ಸೃಷ್ಟಿಯಾಗಲಿದೆ.