ಚೆನ್ನೈಯಲ್ಲಿ ಜಡಿಮಳೆ: ನಿಟ್ಟುಸಿರು ಬಿಟ್ಟ ಜನತೆ

0
539

ಚೆನ್ನೈ, ಜೂ. 27: ನೀರಿಲ್ಲದೆ ತತ್ತರಿಸುವ ಚೆನ್ನೈಯಲ್ಲಿ ಜಡಿಮಳೆ ಸುರಿದಿದೆ. ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ನಗರ ಮತ್ತು ಪರಿಸರ ಪ್ರದೇಶದಲ್ಲಿ ಬುಧವಾರ ಸಂಜೆ ಭಾರೀ ಮಳೆ ಸುರಿಯಿತು.

ಗಿಂಡಿ, ಟಿ.ನಗರ, ವಳಸರವಾಕ್ಕಂ, ಅಶೋಕ್‍ನಗರ, ನುಂಗಂಪಾಕ್ಕಂ, ಕೆ.ಕೆ. ನಗರ, ಎಗ್‍ಮೋರ್, ತಾಂಬರಂ, ವಂಡಲೂರ್ ಮೊದಲಾದ ಸ್ಥಳಗಳಲ್ಲಿ ಮಳೆ ಸುರಿದಿದೆ. ತಿರುವಳ್ಳೂರ್ ಜಿಲ್ಲೆ ಸಹಿತ ತಮಿಳ್ನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ ಸುರಿದಿದೆ.