ಹೊಸದಿಲ್ಲಿ, ಜೂ. 27: ಈ ವರ್ಷ ಹಜ್ ಯಾತ್ರೆಯಲ್ಲಿ ಹಜ್ ಅಸಿಸ್ಟೆಂಟ್ಗಳಾಗಿ ಕೇರಳ ಪೊಲೀಸ್ ಇಲಾಖೆ ಐವರು ಮುಸ್ಲಿಮ್ ಮಹಿಳೆಯರನ್ನು ಕಳುಹಿಸಲಿದೆ. ಹೊಸದಿಲ್ಲಿಯಲ್ಲಿ ಕೇಂದ್ರ ಹಜ್ ಕಮಿಟಿಯ ತರಬೇತಿ ಪಡೆದಿದ್ದು ಐವರು ಮಹಿಳೆಯರು ಬುಧವಾರ ಸೌದಿ ಅರೇಬಿಯಕ್ಕೆ ತೆರಳಿದ್ದಾರೆ. ಕರಿಪ್ಪೂರ್ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ ಸ್ಟೇಬಲ್, ಮಲಪ್ಪುರಂ ಪಿಂಕ್ ಪೊಲೀಸ್ ರಹಿಯಾನತ್, ತಲಶ್ಶೇರಿ ಪೊಲೀಸ್ಠಾಣೆಯ ಕಾನ್ಸ್ಟೇಬಲ್ ಕೆ. ಆಯಿಶಾ. ಮಟ್ಟಾಂಚೇರಿ ಟೂರಿಸ್ಟ್ ಪೊಲೀಸ್ನ ಕಾನ್ಸ್ಟೇಬಲ್ ಕೆ.ಎಸ್. ರಮ್ಲು, ಮುವಾಟ್ಟಪುಯದ ಕಾನ್ಸ್ಟೇಬಲ್ ನಸೀಮಾ , ತೃಶೂರ್ ರೈಲ್ವೆ ಪೊಲೀಸಿನ ನೂರ್ಜಹಾನ್ ಹಜ್ ಅಸಿಸ್ಟೆಂಟ್ ಆಗಿ ತೆರಳಿದ್ದಾರೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಇವರಿಗೆ ಹೈದರಾಬಾದಿನಲ್ಲಿ ನಡೆದ ಸಂದರ್ಶನದಲ್ಲಿ ಹಜ್ ಸೇವೆಗೆ ಕೇ೦ದ್ರ ಸರಕಾರ ಮೂರು ತಿಂಗಳ ಡೆಪ್ಯುಟೇಶನ್ ನೀಡಿದೆ. ಇಂಗ್ಲಿಷ್, ಹಿಂದಿ ಸಾಮಾನ್ಯ ಅರಿವನ್ನು ಹೊಂದಿರುವ ಇವರಿಗೆ ಅರಬಿ ಭಾಷೆಯೂ ಗೊತ್ತಿದೆ. ಕಳೆದ ವರ್ಷ ಇಬ್ಬರು ಮಹಿಳಾ ಪೊಲೀಸರನ್ನು ಹಜ್ ಅಸಿಸ್ಟೆಂಟ್ ಆಗಿ ಕಳುಹಿಸಿಕೊಡಲಾಗಿತ್ತು. ಈ ವರ್ಷ ದೇಶದಿಂದ ಹಜ್ ಅಸಿಸ್ಟೆಂಟ್ ಆಗಿ ಆಯ್ಕೆಯಾದ ಮಹಿಳಾ ಪೊಲೀಸರಲ್ಲಿ ಅರ್ಧಾಂಶ ಕೇರಳದವರು. ಕೇರಳದ ಪೊಲೀಸ್ ಇಲಾಖೆಯಲ್ಲಿ ಮುಸ್ಲಿಮ್ ಮಹಿಳೆಯರು ಇತರೆಡೆಗಿಂತ ಹೆಚ್ಚು ಇದ್ದಾರೆ.












