ಇಸ್ಲಾಮೋಫೋಬಿಯಾ ಇರುವುದು ಅಮೆರಿಕಾದಲ್ಲಲ್ಲ, ಅರಬ್ ರಾಷ್ಟ್ರಗಳಲ್ಲಿ

0
1005

ಅಬ್ದುಸ್ಸಲಾಮ್ ವಾಣಿಯಂಬಲಮ್

ಡಾ| ಮುಹಮ್ಮದ್ ಮುರ್ಸಿ ಇತ್ತೀಚೆಗೆ ವಿಚಾರಣಾ ನ್ಯಾಯಾಲಯದಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತರಾದರು ಎಂಬ ವರದಿ ಪ್ರಕಟವಾಯಿತು. ನಿಜವಾಗಿ, ಅಲ್ಲಿ ಏನು ಘಟಿಸಿತು ಎಂಬ ಬಗ್ಗೆ ಸ್ಪಷ್ಟವಾದ ವಿವರ ಯಾರ ಲ್ಲಿಯೂ ಇಲ್ಲ. ಅದು ಕಾಲಕ್ರಮೇಣ ಬಹಿ ರಂಗವಾಗಬಹುದು. ಸತ್ಯಾಂಶ ಏನೆಂಬುದು ಸ್ವಲ್ಪ ತಡವಾಗಿ ಯಾದರೂ ಹೊರ ಬರಬಹುದು, ಇನ್ಶಾ ಅಲ್ಲಾಹ್ ಕೊನೆಗೆ ಸಿಕ್ಕ ಮಾಹಿತಿ ಪ್ರಕಾರ, ಅವರು ಕುಸಿದು ಬಿದ್ದಾಗ ಮೃತ ಪಟ್ಟಿರಲಿಲ್ಲ. ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅಂಬ್ಯುಲೆನ್ಸ್‍ನಲ್ಲಿ ಇಂಜೆಕ್ಷನ್ ಕೊಟ್ಟು ಕೊಲೆಗೈಯಲಾಯಿತು ಎಂಬ ವರದಿಗಳು ಹೊರ ಬರುತ್ತಿದೆ. ಹಾಗೆಲ್ಲಾ ನಡೆಯುವ ಸಾಧ್ಯತೆಯಿದೆ. ಇಮಾಮ್ ಹಸನುಲ್ ಬನ್ನಾರ ಮೇಲೆ ಗುಂಡಿನ ದಾಳಿ ನಡೆದರೂ ವಾಸ್ತವದಲ್ಲಿ ಅವರು ಮರಣ ಹೊಂದುವಷ್ಟು ಗಾಯಗೊಂಡಿರಲಿಲ್ಲ. ಆದರೆ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅಂದಿನ ದೊರೆ ಫಾರೂಕ್ ಹಸನುಲ್ ಬನ್ನಾರಿಗೆ ಯಾವುದೇ ರೀತಿಯ ಚಿಕಿತ್ಸೆ ನೀಡಬಾರದೆಂದು ಆಸ್ಪತ್ರೆಯ ಅಧಿಕಾರಿಗಳಿಗೆ ಆದೇಶಿಸಿದ್ದರು. ಹಾಗೆ ಅವರಿಗೆ ಯಾವುದೇ ಚಿಕಿತ್ಸೆ ದೊರೆಯದೆ ಗಂಟೆ ಗಟ್ಟಲೆ ರಕ್ತಸ್ರಾವವಾಗಿ ಹಸನುಲ್ ಬನ್ನಾ ಹುತಾತ್ಮರಾದರು. ಡಾ| ಮುಹಮ್ಮದ್ ಮುರ್ಸಿಯನ್ನು ನೇಣುಗಂಭಕ್ಕೇರಿಸುವಷ್ಟು ಧೈರ್ಯ ಅಬ್ದುಲ್ ಫತ್ತಾಹ್ ಸೀಸಿಗೆ ಇರಲಿಲ್ಲ. ನೇಣು ಗಂಭಕ್ಕೇರಿ ಹುತಾತ್ಮರಾಗುವ ಮುರ್ಸಿಯನ್ನು ಅವರು ಭಯಪಟ್ಟರು. ಅವರು ಮಾತ್ರವಲ್ಲ ಅವರಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತಿದ್ದ ಸೌದಿ ಅರೇಬಿಯ, ಯು.ಎ.ಇ. ಮುಂತಾದ ದೇಶಗಳು ಕೂಡಾ ನೇಣಿಗೇರುವ ಹುತಾತ್ಮರನ್ನು ಭಯಪಟ್ಟರು. ಅದಕ್ಕಾಗಿ ಅವರು ಮುರ್ಸಿಯನ್ನು ಜೈಲಿನಲ್ಲಿರಿಸಿ ಹಂತ ಹಂತವಾಗಿ ಕೊಲ್ಲಲು ತೀರ್ಮಾನಿಸಿದರು. ಅದನ್ನು ಅವರು ನ್ಯಾಯಾಲಯದಲ್ಲಿ ಸಿಕ್ಕ ಅವಕಾಶದ ಸಂದರ್ಭಗಳಲ್ಲೆಲ್ಲಾ ಹೇಳುತ್ತಿದ್ದರು.
ಮೌತುಲ್ ಬತೀಅ ಅಂದರೆ ನಿಧಾನಗತಿಯ ಮರಣದಂಡನೆಯನ್ನು ನನಗೆ ವಿಧಿಸಲಾಗಿದೆ. ನಿಧಾನಗತಿಯಲ್ಲಿ ಅವರು ಕೊಲ್ಲುತ್ತಿದ್ದಾರೆ. ಪ್ರಸಕ್ತ ಕಾಲಘಟ್ಟದಲ್ಲಿ ಸರ್ವಾಧಿಕಾರಿಗಳು ಜನರನ್ನು ಇದೇ ರೀತಿ ಕೊಲ್ಲುತ್ತಿದ್ದಾರೆ. ಯಾಸಿರ್ ಆರಫಾತ್ ರನ್ನು ಕೂಡಾ ಅವರು ಹೀಗೇ ವಿಷಪ್ರಾಶನ ಮಾಡಿ ಕೊಂದರು. ಜನಸಾಮಾನ್ಯರಿಗೆ ಅದು ಸಹಜ ಸಾವಿನಂತೆ ಕಂಡು ಬರುತ್ತದೆ. ಹಮಾಸ್ ನಾಯಕ ಖಾಲಿದ್ ಮಿಶ್‍ಅಲ್ ರನ್ನು ಕೂಡಾ ಜೋರ್ಡಾನ್‍ನಲ್ಲಿ ಇದೇ ರೀತಿ ಕೊಲ್ಲಲು ಶ್ರಮಿಸಿದ್ದರು. ಒಂದು ವಸ್ತುವನ್ನು ಅವರ ಕಿವಿಯೊಳಗೆ ಹಾಕಿ ಸಹಜ ಮರಣದಂತೆ ಕಂಡು ಬರುವ ಪ್ರಯತ್ನದಲ್ಲಿ ಮೊಸಾದ್ ತೊಡಗಿತ್ತು. ಆದರೆ ಮೊಸಾದ್ ಅದರರಲ್ಲಿ ವಿಫಲವಾಯಿತು. ನಿಜವಾಗಿ ಇಂತಹ ಸಹಜ ಸಾವುಗಳು ಕೊಲೆಗಳಾ ಗಿವೆ. ಹೀಗೆ ಕೊಲ್ಲಲ್ಪಟ್ಟವರಲ್ಲಿ ಶಹೀದ್ ಮುಹಮ್ಮದ್ ಮುರ್ಸಿ ಸೇರಿದ್ದಾರೆ. ರೋಗಬಾಧಿತ ರಾದ ಅವರಿಗೆ ಯಾವುದೇ ಚಿಕಿತ್ಸೆ ನೀಡದೆ ಇಕ್ಕಟ್ಟಿನಿಂದ ಕೂಡಿದ ಜೈಲಿನಲ್ಲಿ ಕೂಡಿ ಹಾಕಿ ಅವರನ್ನು ಕೊಂದರು. ಅವರ ಪತ್ನಿ ಮಕ್ಕಳಿಗೆ ಭೇಟಿ ಮಾಡುವ ಅವಕಾಶವನ್ನು ನಿರಾಕರಿಸಲಾ ಯಿತು. ಅವರ ಪುತ್ರ ಹಲವು ಬಾರಿ ಈ ಹೇಳಿಕೆಗಳನ್ನು ನೀಡಿದ್ದರು. ತಂದೆಯನ್ನು ಭೇಟಿ ಯಾಗಲು ನಮಗೆ ಅವಕಾಶ ನೀಡುತ್ತಿಲ್ಲ. ಅವರಿಗೆ ಅಗತ್ಯವಾದ ಔಷಧಗಳನ್ನು ನೀಡುತ್ತಿಲ್ಲ. ಚಿಕಿತ್ಸೆಯನ್ನೂ ನೀಡುತ್ತಿಲ್ಲ. ವಿಶ್ವದ ಮಾನವ ಹಕ್ಕುಗಳ ಸಂಘಟ ನೆಗಳು ಅವರನ್ನು ಭೇಟಿ ಯಾಗಲು ಪ್ರಯತ್ನ ಪಟ್ಟರೂ ಅವಕಾಶ ನಿರಾಕರಿಸಲಾಯಿತು.

ಡಾ| ಮುಹಮ್ಮದ್ ಮುರ್ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಹೇಳುವ ವಿಷಯಗಳು ಮಾತ್ರ ಹೊರಜಗತ್ತಿಗೆ ಗೊತ್ತಾಗುತ್ತದೆ. ಅವರು ಒಮ್ಮೆ, “ನಾನು ಕುರ್ ಆನ್ ಬೇಕೆಂದು ಕೇಳಿದಾಗ ಅವರು ಜೈಲಿನಲ್ಲಿ ನಿರಾಕರಿಸಿದರು. ಅವರು ನ್ಯಾಯಾಲಯದಲ್ಲಿ, ನನಗೆ ಕುರ್‍ಆನ್ ಓದಲು ಸಾಧ್ಯವಿಲ್ಲವೆಂದಲ್ಲ. ನಾನು ಬಹಳ ಚಿಕ್ಕಂದಿನಲ್ಲಿಯೇ ಕಂಠಪಾಟ ಮಾಡಿರುವೆನು. ನಾನು ಕುರ್‍ಆನನ್ನು ಕೇಳಿರುವುದು ಅದನ್ನು ಸ್ಪರ್ಶಿಸಬೇಕೆಂಬ ಬಯಕೆಯಿಂದಲೇ ಹೊರತು ಕುರ್ ಆನ್ ಪಠಿಸಲು ತಿಳಿಯದಿದ್ದರಿಂದಲ್ಲ” ಎಂದು ಹೇಳಿದರು.

ಈಜಿಪ್ಟ್ ನ ಆಡಳಿತಗಾರ ಮತ್ತು ಸೇನೆಗೆ ಕುರ್‍ಆನ್ ಕುರಿತು ಎಷ್ಟು ಭಯವಿದೆಯೆಂಬುದನ್ನು ಇದರಿಂದ ತಿಳಿಯಬಹುದು. ಸೈಯದ್ ಕುತುಬ್ ಮತ್ತು ಅವರ ಅನುಯಾಯಿಗಳನ್ನು ಕೊಂದ ಸಂದರ್ಭದಲ್ಲಿ ಜೈಲಿನ ಅಧಿಕಾರಿಗಳು ಜೈಲಿನಲ್ಲಿ ಕುರ್‍ಆನನ್ನು ಕಾಲಿನಿಂದ ಒದ್ದಿದ್ದರು ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ನಿಜವಾಗಿ ಇವರ ವಿರೋಧಿ ಇಖ್ವಾನಿನೊಂದಿಗೋ ಅಥವಾ ಹಸನುಲ್ ಬನ್ನಾರ ವಿರುದ್ಧವೋ ಮುರ್ಸಿ ವಿರುದ್ಧವೋ ಆಗಿರಲಿಲ್ಲ. ಅವರಿಗೆ ಅಲ್ಲಾಹನ ಗ್ರಂಥದ ಬಗ್ಗೆ ವಿರೋಧವಿತ್ತು. ಮುಹಮ್ಮದ್ ಇಬ್ನು ಸಲ್ಮಾನ್, ಮುಹಮ್ಮದ್ ಬಿನ್ ಸಾಹಿದ್, ಸೀಸಿ ಮುಂತಾದವರು ನಮಗೆ ಇಸ್ಲಾವಿೂ ರಾಜಕೀಯದೊಂದಿಗೆ ವಿರೋಧವಿಲ್ಲ ಬದಲಾಗಿ ಇಸ್ಲಾಮಿನೊಂದಿಗಾಗಿದೆ.

ಪೊಲಿಟಿಕಲ್ ಇಸ್ಲಾಮ್ ಎಂದು ಹೇಳಿ ಅವರು ಜನರನ್ನು ವಂಚಿಸುತ್ತಿದ್ದಾರೆ. ಇದರೊಂದಿಗೆ ಇತಿಹಾಸದ ಅಂತ್ಯವಾಯಿತು ಎಂದು ಅಬ್ದುಲ್ ಫತ್ತಾಹ್ ಸೀಸಿ ಅಂದುಕೊಂಡಿದ್ದಾರೆ. ಆದರೆ ಇತಿಹಾಸ ಕೊನೆಗೊಳ್ಳದು. ನಿಜವಾಗಿ ಇದು ಈಗ ಪ್ರಾರಂಭವಾಗಿದೆ. ಅನೇಕ ಕೊಲೆಗಾರರು ಯಾರನ್ನಾದರೂ ದೈಹಿಕವಾಗಿ ಕೊನೆಗೊಳಿಸಿದರೆ ಅವರ ಇತಿಹಾಸ ಅಂತ್ಯವಾಯಿತು ಎಂದು ಭಾವಿಸುತ್ತಾರೆ. ಆದರೆ ಅವರು ಶತ ಮೂರ್ಖರು. ಇವರೆಲ್ಲಾ ದೊಡ್ಡ ಸ್ಟ್ರಾಟಜಿಸ್ಟ್‍ಗಳು. ಬುದ್ಧಿವಂತರು, ಝಿಯೋನಿಸ್ಟ್‍ಗಳು. ಸಿ.ಐ.ಎ. ಮೊಸಾದ್ ಮುಂತಾ ದವುಗಳ ಷಡ್ಯಂತ್ರ ಪ್ರಕಾರ ಕಾರ್ಯಾಚಿಸುತ್ತಿದ್ದಾರೆಂದು ಹೆಚ್ಚಿನವರಿಗೆ ತಿಳಿದಿದೆಯಾದರೂ ವಾಸ್ತವದಲ್ಲಿ ಅವರು ಮೂರ್ಖರು. ಓರ್ವ ವ್ಯಕ್ತಿಯನ್ನು ಕೊಂದರೆ ಆ ಮೂಲಕ ವಿಶ್ವದಲ್ಲಿ ಒಂದು ಹೊಸ ಕ್ರಾಂತಿಯ ಆರಂಭವಾಗುತ್ತದೆ. ಜಮಾಲ್ ಅಬ್ದುನ್ನಾಸಿರ್, ಶಹೀದ್ ಸೈಯದ್ ಕುತುಬ್‍ರನ್ನು ಅವರು ಕೊಂದರು. ಆದರೆ ಆ ಬಳಿಕ ಇವರು ಹೇಳುತ್ತಿರುವಂತಹ ಪೊಲಿಟಿಕಲ್ ಇಸ್ಲಾಮ್ ಹೆಚ್ಚು ಶಕ್ತಿಯುತವಾಯಿತು. ಇಂದು ವಿಶ್ವದಲ್ಲಿ ಎಲ್ಲಾ ಕಡೆ ಶಹೀದ್ ಸೈಯದ್ ಕುತುಬ್ ಸ್ಮರಿಸಲ್ಪಡುತ್ತಿದ್ದಾರೆ. ಈ ಲೋಕಾಂತ್ಯದ ವರೆಗೆ ಸೈಯದ್ ಕುತುಬ್ ಮತ್ತು ಹಸನುಲ್ ಬನ್ನಾ ಸ್ಮರಿಸಲ್ಪಡುತ್ತಲೇ ಇರುವರು. ಇದೇ ವೇಳೆ ಅಬ್ದುಲ್ ನಾಸಿರ್‍ನನ್ನು ಯಾರು ಸ್ಮರಿಸುತ್ತಾರೆ? ಒಂದು ಕಾಲದಲ್ಲಿ ಈಜಿಪ್ಟ್ ಬೀದಿಯನ್ನು ಬುಡಮೇಲುಗೊಳಿಸಿದ್ದ ಅಬ್ದುಲ್ ನಾಸಿರ್ ಈಗ ಎಲ್ಲಿ? ಅಬ್ದುನ್ನಾಸಿರ್ ಕೂಡಾ ತನ್ನ ಕೊನೆಗಳಿಗೆ ಯಲ್ಲಿ ದೇಹಕ್ಕೆ ವಿಷ ಸೇರಿ ಮರಣ ಹೊಂದ ಬೇಕಾಯಿತು.
ಈಗ ಆ ವ್ಯಕ್ತಿಗೆ ಅನುಯಾಯಿಗಳು ಕೂಡಾ ಇಲ್ಲ. ಒಂದು ಕಾಲದಲ್ಲಿ ನಾಸಿರಿಸ್ಟ್ ಗಳು ಅರಬ್ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿದ್ದರು. ಆದರೆ ಅವರನ್ನು ಇತಿಹಾಸದಿಂದಲೇ ಕಿತ್ತೊಗೆಯಲಾಯಿತು. ಇಂದು ಈಜಿಪ್ಟ್ ನ ಪಾರ್ಲಿಮೆಂಟಿನಲ್ಲಿ ನಾಸಿರಿಸ್ಟ್ ಗಳು ಒಂದು ಸ್ಥಾನ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಅದೇ ವೇಳೆ ಶಹೀದ್ ಸೈಯದ್ ಕುತುಬ್ ಪ್ರತಿನಿಧಿಸಿದ್ಧ ಸಿದ್ಧಾಂತವು ವಿಶ್ವದೆಲ್ಲೆಡೆ ಈಗಲೂ ನೆಲೆನಿಂತಿದೆ. ಅದಕ್ಕೆ ಕಾರಣ ಅವರು ಪ್ರತಿನಿಧಿಸುತ್ತಿದ್ದುದು ಇಸ್ಲಾಮ್ ಎಂಬ ಸತ್ಯವನ್ನಾಗಿತ್ತು. ಇದೇ ರೀತಿ ಮುರ್ಸಿಯವರನ್ನು ಕೊಂದದ್ದರಿಂದ ಇತಿಹಾಸ ಕೊನೆಗೊಳ್ಳದು. ಅದರ ಪ್ರಾರಂಭವಾಗಿದೆ. ಮುರ್ಸಿಯನ್ನು ಕೊಂದ ಕೊಲೆಗಾರರು ಅರ್ಥಗರ್ಭಿತ ಮೌನದಲ್ಲಿದ್ದಾರೆ.

ಮುಹಮ್ಮದ್ ಮುರ್ಸಿಯವರು ಉಮ್ರಾ ನಿರ್ವಹಿಸಿದ ಬಳಿಕ ಇಹ್ರಾಮ್ ಧರಿಸಿ ನಮಾಝ್ ನಿರ್ವಹಿಸುತ್ತಿರುವಾಗ ಕುರ್ ಆನ್ ವಚನ ಕೇಳಿ ಅಳುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಮುಹಮ್ಮದ್ ಮುರ್ಸಿಯವರದ್ದು ನಾವು ನಿರೀಕ್ಷಿಸಿರುವುದಕ್ಕಿಂತಲೂ ಮಹತ್ತರವಾದ ವ್ಯಕ್ತಿತ್ವವಾಗಿತ್ತು. ಅಷ್ಟೊಂದು ಗೌರವಾನ್ವಿತ ವ್ಯಕ್ತಿ ಯಾಗಿದ್ದರು. ಅವರ ಕುರಿತು ಅಧ್ಯಯನ ಮಾಡಿದಾಗ ಕೇಳಿದಾಗ ಅವರದ್ದು ಇಷ್ಟೊಂದು ಸರಳ ವ್ಯಕ್ತಿತ್ವವೇ ಎಂದು ಅನ್ನಿಸಿದ್ದಿದೆ. ಅಷ್ಟೊಂದು ನಿಸ್ವಾರ್ಥತೆಯಿಂದ ಕೂಡಿದ ನಿಷ್ಕಳಂಕತೆಯಿಂದ ಕೂಡಿದ ಓರ್ವ ವ್ಯಕ್ತಿಯಾಗಿದ್ದರು ಎಂಬುದೇ ಮುರ್ಸಿಯವರ ವಿಶೇಷತೆ. ಈಜಿಪ್ಟಿನ, ಹಲವು ದೇಶಗಳ ಮತ್ತು ಹುಸ್ನಿ ಮುಬಾರಕ್‍ರ ಹಲವು ರಹಸ್ಯಗಳು ಅವರ ಬಳಿಯಲ್ಲಿತ್ತು. ಅಧ್ಯಕ್ಷರೆಂಬ ಅರಮನೆಯಲ್ಲಿ ಅವರಿದ್ದರು. ಆದರೆ ತನ್ನ ಅಸಾಮಾನ್ಯವಾದ ವಿನಯತೆಯಿಂದ ಆ ಯಾವುದೇ ರಹಸ್ಯಗಳನ್ನು ಅವರು ಹೊರ ಬಿಟ್ಟಿರಲಿಲ್ಲ. ಒಮ್ಮೆ ನ್ಯಾಯಾಲಯದ ಮುಂದೆ ಅವರು, “ಈಜಿಪ್ಟಿನ ಹಲವು ರಹಸ್ಯಗಳ ಬಗ್ಗೆ ನನಗೆ ತಿಳಿದಿದೆ. ಆದರೆ ಈಜಿಪ್ಟಿನ ಭವಿಷ್ಯದ ಬಗ್ಗೆ ಯೋಚಿಸಿ ನಾನು ಅದನ್ನು ಹೇಳುತ್ತಿಲ್ಲ. ಇಖ್ವಾನಿಗಳು ಮತ್ತು ಇಸ್ಲಾಮಿಗಳು ಪ್ರಯೋಜನ ಪಡೆಯಬಹುದಾದಂತಹ ರಹಸ್ಯಗಳು ಅವು” ಎಂದಿದ್ದರು.

ಸೇನೆಯು ತನ್ನ ಸರಕಾರ ಬುಡಮೇಲುಗೊಳಿಸುತ್ತಿದೆಯೆಂಬ ಸೂಚನೆ ದೊರೆತಾಗಲೂ ಕೂಡಾ ಅವರು ಆ ಹಳೆಯ ವಿಚಾರಗಳ ಅಥವಾ ಆ ರಹಸ್ಯಗಳ ಬಗ್ಗೆಯಾಗಲೀ ಒಂದೇ ಒಂದು ವಾಕ್ಯ ಕೂಡಾ ಹೊರಬಿಟ್ಟಿರಲಿಲ್ಲ. ಅದು ಹೇಳಲೇ ಬಾರದೆಂದು ಅವರು ನಿರ್ಧರಿಸಿದ್ದರು. ಅದನ್ನು ಯಾರ ಬಳಿಯಲ್ಲಾದರೂ ಅವರು ಹೇಳಿರಬಹುದು. ಅದು ಮುಂದೆ ಎಂದಾದ ರೊಂದು ದಿನ ಬಹಿರಂಗವಾಗಬಹುದು ಎಂದು ನಾವು ನಿರೀಕ್ಷಿಸೋಣ. ಅದು ಬಹಳ ಗಂಭೀರವಾದ ರಹಸ್ಯಗಳಾಗಿರಬಹುದು. ಆ ರಹಸ್ಯಗಳು ಬಹಿರಂಗವಾಗಬೇಕು. ಅವರ ವಿರುದ್ದ ನಡೆಸುತ್ತಿದ್ದ ಷಡ್ಯಂತ್ರಗಳ ಬಗ್ಗೆ ಅವರು ಒಮ್ಮೆ ತಿಳಿಸಿದ್ದರು. ಕೆಲ ಅರಬ್ ಆಡಳಿತಗಾರರು ಕೂಡಾ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದಿದ್ದರು.
“ನನಗೆ ಸೀಸಿಯನ್ನು ಭೇಟಿಯಾಗಲು ಆಗುತ್ತಿಲ್ಲ. ನಾನು ಅವರನ್ನು ಹೇಗೆ ಭೇಟಿಯಾಗಲಿ? ಮುರ್ಸಿ ಎಂಬ ಅಧ್ಯಕ್ಷರು ಸೀಸಿಯವರನ್ನು ಸೇನಾನಾಯಕರನ್ನಾಗಿ ನೇಮಕ ಮಾಡಿದ ಪ್ರಸ್ತಾವನೆಗೆ ಸಹಿ ಹಾಕಿದ್ದರು. ಈ ಸಹಿ ಹಾಕಿದ ಅದೇ ಕೈಗಳಿಗೆ ಕೋಳ ತೊಡಿಸಿ ಅಧ್ಯಕ್ಷರ ಅರಮನೆಯಿಂದ ಜೈಲು ಕೋಣೆಗೆ ಕೊಂಡು ಹೋದ ಕ್ರೂರಿಯಾದ ಓರ್ವ ವ್ಯಕ್ತಿಯನ್ನು ನಾನು ಹೇಗೆ ಭೇಟಿಯಾಗಲಿ” ಎಂದು ಟರ್ಕಿ ಅಧ್ಯಕ್ಷ ಉರ್ದುಗಾನ್ ಕೇಳಿದ್ದರು.

ವಿಶ್ವದಲ್ಲಿ ಐವತ್ತೈದು ಮುಸ್ಲಿಮ್ ರಾಷ್ಟ್ರಗಳಿವೆ. ಮುರ್ಸಿಯವರ ನಿಧನ ವಾರ್ತೆ ತಿಳಿದ ಬಳಿಕ ಎಷ್ಟು ದೇಶಗಳು ಪ್ರತಿಕ್ರಿಯಿಸಿವೆ? ಟರ್ಕಿಯ ಅಧ್ಯಕ್ಷ ಉರ್ದುಗಾನ್ ಮರಣದ ವಾರ್ತೆ ಕೇಳಿದ ಕೂಡಲೇ “ಶಹೀದ್ ಡಾಕ್ಟರ್ ಮುಹಮ್ಮದ್ ಮುರ್ಸಿ” ಎಂದು ಪ್ರತಿಕ್ರಿಯಿಸಿದರು. ಕತಾರ್ ಅಮೀರ್ ತನ್ನ ನೋವು ದುಃಖ ಸಂತಾಪವನ್ನು ಸೂಚಿಸಿದರು. ಇತರ ಆಡಳಿತಗಾರರು ಮೌನ ವಹಿಸಿದರು. ಇದು ಮುಸ್ಲಿಮ್ ಜಗತ್ತಿನ ಸ್ಥಿತಿ. ಈ ಹಿಂದೆ ಹಸನುಲ್ ಬನ್ನಾರ ಮಯ್ಯತ್ ಜೊತೆ ಇದೇ ರೀತಿ ವರ್ತಿಸಿದ್ದರು. ಮುರ್ಸಿಯವರ ಮಯ್ಯತ್‍ನ ಮುಂದೆ ಈಗ ಅದರ ಪುನರಾ ವರ್ತನೆಯಾಗಿದೆ. ಮಯ್ಯತ್ ಸ್ನಾನ ಮಾಡಿಸಿ ಒಂದು ಸಾಮಾನ್ಯ ಮಯ್ಯತ್‍ನಂತೆ ಅದನ್ನು ಗೋರಿಯ ಕಡೆಗೆ ಕೊಂಡೊಯ್ಯಲಾಯಿತು. ಅವರ ಈರ್ವರು ಪುತ್ರರು ಮತ್ತು ವಕೀಲರಿಗೆ ಮಾತ್ರ ದಫನದ ಅಂತಿಮ ಕ್ರಿಯೆಯಲ್ಲಿ ಭಾಗವಹಿ ಸಲು ಅನುಮತಿ ನೀಡಲಾಗಿತ್ತು. ಅವರ ಪತ್ನಿಗೆ ಕೂಡಾ ಮಯ್ಯತ್ ನೋಡಲು ಸೀಸಿ ಆಡಳಿತ ಅವಕಾಶ ನಿರಾಕರಿಸಿತ್ತು. ಕಳೆದ ಮೂರು ವರ್ಷ ಗಳಿಂದ ಅವರಿಗೆ ಜೈಲಿಗೆ ಹೋಗಲು ಅನುಮತಿ ನೀಡಿರಲಿಲ್ಲ. ಈ ಹಿಂದೆ ಇಮಾಮ್ ಹಸನುಲ್ ಬನ್ನಾರನ್ನು ಕೊಂದಾಗಲೂ ಅವರ ಶವ ಮಂಚವನ್ನು ಮಹಿಳೆಯರೇ ಎತ್ತಿಕೊಂಡಿದ್ದರು.

ತೊಂಬತ್ತು ವರ್ಷದ ವಯೋವೃದ್ಧ ಹುಸ್ನಿ ಮುಬಾರಕ್ ಈಗಲೂ ಫೈವ್ ಸ್ಟಾರ್ ಹೊಟೇಲು ಗಳನ್ನೂ ಮೀರಿಸುವಂತಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಸ್ನಿ ಮುಬಾರಕ್ ದೇಶವನ್ನು ಮೂವತ್ತು ವರ್ಷಗಳ ಕಾಲ ಸರ್ವಾಧಿಕಾರಿ ಆಡಳಿತ ನಡೆಸಿದವರಾಗಿದ್ದರು. ಅವರಿಗೆ ವಿಶ್ವ ದಲ್ಲಿಯೇ ಅತ್ಯುನ್ನತ ಮಟ್ಟದ ಚಿಕಿತ್ಸೆಯನ್ನು ಸೀಸಿ ನೀಡುತ್ತಿದ್ದಾರೆ. ಅದೇ ವೇಳೆ 65ರ ಹರೆ ಯದ ಮುರ್ಸಿಯವರ ಹತ್ಯೆಯಾಗಿದೆ. ಮುಹಮ್ಮದ್ ಮುರ್ಸಿ ಜನರಿಂದ ಆಯ್ಕೆಗೊಂಡ ಅಧ್ಯಕ್ಷರಾಗಿದ್ದಾರೆ. ಮುರ್ಸಿ ಇವರ ಕೆಲ ಅನೈತಿಕ ಆಡಳಿತಕ್ಕೆ, ಚಟುವಟಿಕೆಗಳಿಗೆ ಕೊನೆಹಾಡಿದ್ದ ಅಧ್ಯಕ್ಷರಾಗಿದ್ದರು. ಆದ್ದರಿಂದ ಅವರನ್ನು ಕೊಲ್ಲಲು ಸಿದ್ಧರಾದರು. ಮುಹಮ್ಮದ್ ಮುರ್ಸಿ ಭಾರತಕ್ಕೆ ಭೇಟಿಯಿತ್ತಾಗ ಇಪ್ಪತ್ತು ಕೋಟಿ ಮುಸ್ಲಿಮರಿರುವ ಈ ದೇಶದ ನಾಯಕರನ್ನು ಭೇಟಿಯಾಗಲು ಸಮಯ ಮೀಸಲಾಗಿರಿಸಿದ್ದರು. ಅವರು ಅವರನ್ನು ಕಂಡು ಅವರು ಹೇಳಿದ್ದೆಲ್ಲವನ್ನೂ ಆಲಿಸಿ ಅವರಿಗೆ ಹೇಳಲಕ್ಕಿರುವುದನ್ನು ಹೇಳಿ ಬಿಟ್ಟರು. ಇಂದು ಇಸ್ಲಾಮೋಫೋಭಿಯಾ ಇರುವುದು ಅಮೇರಿಕಾ ಅಥವಾ ಯುರೋಪ್‍ನಲ್ಲಿ ಅಲ್ಲ, ಅರಬ್ ರಾಷ್ಟ್ರಗಳಲ್ಲಾಗಿದೆ.