ಪಕ್ಕಲಡ್ಕ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ‘ಮಾದರಿ ನೆರೆಹೊರೆ ಮಾದರಿ ಸಮಾಜ’ ಅಭಿಯಾನದ ಪ್ರಯುಕ್ತ ಸ್ನೇಹ ಕೂಟ

0
307

ಸನ್ಮಾರ್ಗ ವಾರ್ತೆ

ಜಮಾಅತೆ ಇಸ್ಲಾಮೀ ಹಿಂದ್, ಪಕ್ಕಲಡ್ಕ ವರ್ತುಲದ ವತಿಯಿಂದ ಮಾದರಿ ನೆರೆಹೊರೆ ಮಾದರಿ ಸಮಾಜ ಎಂಬ ರಾಷ್ಟ್ರವ್ಯಾಪಿ ಅಭಿಯಾನದ ಪ್ರಯುಕ್ತ ಸ್ನೇಹ ಕೂಟವನ್ನು ಆಯೋಜಿಸಲಾಯಿತು.

ಮುಖ್ಯ ಅತಿಥಿಯಾಗಿ ನಾಸಿರ್ ರೆಂಜಾಡಿ ಭಾಗವಹಿಸಿ ನಮ್ಮಿಂದ ಯಾವಾಗಲೂ ಯಾರಿಗೂ ಉಪಟಲವು ಆಗದ ರೀತಿಯಲ್ಲಿ ಜೀವನ ಸಾಗಿಸಬೇಕು. ನೆರೆಹೊರೆಯವರ ನಲಿವು ನೋವುಗಳಲ್ಲಿ ಪರಸ್ಪರ ಸಂಬಂಧ ಅತಿ ಅಗತ್ಯ. ಪರಸ್ಪರ ಪರಿಚಯ, ಕಷ್ಟಗಳಲ್ಲಿ ಸ್ಪಂದನೆ, ಪ್ರೀತಿ ವಿಶ್ವಾಸ ಪ್ರಾಮಾಣಿಕತೆಯೊಂದಿಗೆ ಪರಸ್ಪರ ನೆರೆಹೊರೆಯವರೊಂದಿಗೆ ಜೀವನವನ್ನು ಸವಿಸುವುದರ ಸೌಂದರ್ಯ ವರ್ಣಿಸಲು ಸಾಧ್ಯವಿಲ್ಲ. ಈ ರೀತಿಯ ನೆರೆಹೊರೆಯವರ ಸಂಬಂಧವನ್ನು ಬಲಿಷ್ಠಪಡಿಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷರಾದ ಅಬ್ದುಲ್ ಗಪೂರ್ ಕುಲಾಯಿ ಮಾತನಾಡಿ ನೆರೆಹೊರೆಯವರ ಸಂಬಂಧದಲ್ಲಿ ಬಲಿಷ್ಠತೆಯು ಬಲಿಷ್ಠ ರಾಷ್ಟ್ರ ಕಟ್ಟಲು ನೆರವಾಗುತ್ತದೆ ಎಂದರು.

ಪ್ರಾಮಾಣಿಕತೆಯ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿದರೆ ನೆರಹೊರೆಯವರ ಸಂಬಂಧ ಬಲಿಷ್ಠವಾಗುತ್ತದೆ, ಒಳಿತಿನ ಕಾರ್ಯಗಳಲ್ಲಿ ಪರಸ್ಪರ ಸಹಕಾರವು ಬಲಿಷ್ಠ ನೆರಹೊರೆಯರ ಸಂಬಂಧವನ್ನು ನಿರ್ಮಿಸಲು ಸಹಕಾರಿಯಾಗುತ್ತದೆ ಎಂದವರು ಹೇಳಿದರು.

ಸಲೀಂ ಮಲಾರ್ ಪ್ರಾಸ್ತವಿಕವಾಗಿ ಮಾತಾಡಿದರು. ವೇದಿಕೆಯಲ್ಲಿ ಎಸ್ಐಒ ದಕ್ಷಿಣ ಕನ್ನಡದ ಕಾರ್ಯದರ್ಶಿ ಹುನೈನ್ ಉಪಸ್ಥಿತರಿದ್ದರು. ಮೊಹಮ್ಮದ್ ಅಶೀರುದ್ದೀನ್ ಆಲಿಯ ಕಾರ್ಯಕ್ರಮ ನಿರೂಪಿಸಿದರು. ಸುಲೈಮಾನ್ ಧನ್ಯವಾದವಿತ್ತರು.