ಇಸ್ರೇಲ್ ಸೇನೆಯಲ್ಲಿ ಮಾನಸಿಕ ಸಮಸ್ಯೆ ಉಲ್ಬಣ

0
498

ಸನ್ಮಾರ್ಗ ವಾರ್ತೆ

ಎರಡು ವರ್ಷಗಳ ಹಿಂದೆ ಗಾಝಾದ ವಿರುದ್ಧ ಯುದ್ಧ ಸಾರಿದ ಬಳಿಕ ಭಾರಿ ಪ್ರಮಾಣದಲ್ಲಿ ತನ್ನ ಸೈನಿಕರು ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ತಿಳಿಸಿದೆ 2023 ಅಕ್ಟೋಬರ್ 7ರ ಬಳಿಕ 65,000 ಕ್ಕಿಂತಲೂ ಅಧಿಕ ಸೈನಿಕರು ಮಾನಸಿಕ ಆರೋಗ್ಯಕ್ಕಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಅಕ್ಟೋಬರ್ 7ರ ಬಳಿಕದ ಘಟನಾವಳಿಗಳಿಂದಾಗಿ ಇಸ್ರೇಲಿನ ಮೂರರಲ್ಲಿ ಓರ್ವ ಸೈನಿಕ ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಓರ್ವ ತೆರಪಿಸ್ಟ್ 750ಕ್ಕಿಂತಲೂ ಅಧಿಕ ಸೈನಿಕರನ್ನು ನಿಭಾಯಿಸುವ ಒತ್ತಡಕ್ಕೆ ಒಳಗಾಗಿದ್ದಾರೆ. ಕೆಲವು ಪ್ರದೇಶಗಳಲ್ಲಿ ಇದಕ್ಕಿಂತಲೂ ಹೆಚ್ಚು ಸೈನಿಕರು ಓರ್ವ ತೆರಪಿಸ್ಟ್ ಬಳಿ ಬರುತ್ತಾರೆ ಮತ್ತು ಅವರನ್ನು ನಿಭಾಯಿಸುವ ಕಷ್ಟವನ್ನು ತೆರಪಿಸ್ಟ್ ಎದುರಿಸುತ್ತಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಹೆದಿಯೋ ಅಹರೋನೋತ್ ಎಂಬ ಇಸ್ರೇಲ್ ಪತ್ರಿಕೆಯು ಇಸೇಲಿನ ಸೈನಿಕರ ಮಾನಸಿಕ ಸ್ಥಿತಿಯ ಬಗ್ಗೆ ವರದಿ ಮಾಡಿತ್ತು. ಡ್ರಗ್ಸ್‌ನ ಸಮಸ್ಯೆಯೂ ಇದೆ ಎಂದು ಅದು ವರದಿ ಮಾಡಿತ್ತು. ಸೈನಿಕರ ಆತ್ಮಹತ್ಯೆ ಪ್ರಕರಣದಲ್ಲೂ ಭಾರಿ ಹೆಚ್ಚಳವಾಗಿದೆ.