ಕುಪ್ಪೆಪದವು ಕಿಂಗ್ಸ್ ಹೊರಿಝೋನ್ ವಾಣಿಜ್ಯ ಕಟ್ಟಡದ ಜಿನಸಿ ಅಂಗಡಿಯಲ್ಲಿ ಬೆಂಕಿ ದುರಂತ

0
948

ಸನ್ಮಾರ್ಗ ವಾರ್ತೆ

ಮಂಗಳೂರು ತಾಲೂಕು ಕಿಲೆಂಜಾರು ಗ್ರಾಮದ ಕುಪ್ಪೆಪದವು ಎಂಬಲ್ಲಿ ಕಿಂಗ್ಸ್ ಹೊರಿಝೋನ್ ವಾಣಿಜ್ಯ ಕಟ್ಟಡದ ಜಿನಸಿ ಅಂಗಡಿಯೊಂದಕ್ಕೆ ಬೆಂಕಿ ತಗುಲಿ ಭಾರೀ ನಷ್ಟ ಸಂಭವಿಸಿದೆ.

ಕಿಂಗ್ಸ್ ಹೊರಿಝೋನ್‌ನಲ್ಲಿ ನೆಲ ಅಂತಸ್ತಿನಲ್ಲಿ ಕೊಳವೂರು ರಹೀದಾ ಎಂಬವರಿಗೆ ಸೇರಿದ ಜಿನಸಿ ಅಂಗಡಿಯಲ್ಲಿ ಬುಧವಾರ ರಾತ್ರಿ ಸುಮಾರು 12 ಗಂಟೆಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಸಂಪೂರ್ಣ ಅಂಗಡಿ ಸುಟ್ಟು ಕರಕಲಾಗಿದ್ದು, ಸುಮಾರು 6 ಲಕ್ಷಗಳ ನಷ್ಟ ಸಂಭವಿಸಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ವಾಣಿಜ್ಯ ಸಂಕೀರ್ಣದ ಮನೆಗಳಿಗೆ ಬೆಂಕಿ ಹರಡಿ ಆಗಬಹುದಾದ ಭಯಾನಕ ಅನಾವುತ ತಪ್ಪಿದೆ.

ಅಗ್ನಿ ಶಾಮಕ ದಳ ತಲುಪುವುದರೊಳಗಾಗಿ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.