ಜೈಶ್ರೀರಾಂ ಘೋಷಣೆ ಕೂಗಲು ಹೇಳಿ ಮುಸ್ಲಿಂ ಟ್ಯಾಕ್ಸಿ ಚಾಲಕನಿಗೆ ಹಲ್ಲೆ

0
1188

ಥಾಣೆ, ಜೂ. 28: ಮುಂಬೈಯಲ್ಲಿ ಜೈಶ್ರೀರಾಂ ಕೂಗಲು ಹೇಳಿ ಮುಸ್ಲಿಂ ಟ್ಯಾಕ್ಸಿ ಚಾಲಕನಿಗೆ ಹಲ್ಲೆ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದು ಫೈಝಲ್ ಎಂಬ ಚಾಲಕನಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು.

ಐವರು ಟ್ಯಾಕ್ಸಿಗೆ ನುಗ್ಗಿ ಬಂದರು. ನಂತರ ಹಲ್ಲೆ ನಡೆಸಿದರು ಎಂದು ಟ್ಯಾಕ್ಸಿ ಚಾಲಕ ಫೈಝಲ್ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ತಂಡ ಫೈಝಲ್ ಗೆ ಹೊಡೆಯಲು ಆರಂಭಿಸಿತು. ಮುಸ್ಲಿಂ ಎಂದು ಗೊತ್ತಾದ ಬಳಿಕ ಜೈಶ್ರೀರಾಂ ಎಂದು ಕೂಗಲು ಬಲವಂತಪಡಿಸಿದರು ಎಂದು ಚಾಲಕ ತಿಳಿಸಿದ್ದಾರೆ.

ಧಾರ್ಮಿಕ ಭಾವನೆಗೆ ಹಾನಿಯೆಸಗಿದ್ದು, ಕಳವು ಯತ್ನಕ್ಕೆ ಆರೋಪಿಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಂಧಿಸಲಾದವರ ಹೆಸರು ಮತ್ತು ವಿವರಗಳನ್ನು ಪೊಲೀಸರು ಬಹಿರಂಗಗೊಳಿಸಿಲ್ಲ. ಘಟನೆಯಲ್ಲಿ ಶಾಮೀಲಾದ ಇತರರನ್ನು ಪೊಲೀಸರು ಹುಡುಕುತ್ತಿದ್ದಾರೆ.