ಮಥುರಾ, ಜೂ. 28: ರಾಮಮಂದಿರ ನಿರ್ಮಾಣ ವಿಷಯದಲ್ಲಿ ಬಿಜೆಪಿ ಜನರನ್ನು ತಪ್ಪು ದಾರಿಗೆಳೆಯುತ್ತಿದೆ ಹಾಗೂ ಮುತ್ತಲಾಕ್ ಮಸೂದೆ ಬದಲಾಗಿ ಬಹುಪತ್ನಿತ್ವ ನಿಷೇಧ ಮಸೂದೆ ಅಗತ್ಯವಾಗಿದೆ ಎಂದು ದ್ವಾರಕಾ ಪೀಠ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದರು. ರಾಮಮಂದಿರವನ್ನು ಕಟ್ಟಲು ತಮ್ಮಿಂದ ಸಾಧ್ಯವೆಂದು ಆರಂಭದಿಂದಲೇ ಬಿಜೆಪಿ ಬಿಂಬಿಸುತ್ತಾ ಬಂದಿದೆ. ಪಾರ್ಲಿಮೆಂಟಿನಲ್ಲಿ ಜಾತ್ಯತೀತತೆಯ ಪ್ರಮಾಣವಚನ ಸ್ವೀಕರಿಸಿದ ಸರಕಾರಕ್ಕೆ ರಾಮ ಮಂದಿರ ಕಟ್ಟಲು ಸಾಧ್ಯವಿಲ್ಲ. ಕೋರ್ಟು ತೀರ್ಪಿನ ಬಳಿಕ ಧರ್ಮಾಚಾರ್ಯದಿಂದ ಮಾತ್ರವೇ ಮಂದಿರ ನಿರ್ಮಿಸಲು ಸಾಧ್ಯವಿದೆ. ಬಾಬರ್ ಅಯೋಧ್ಯೆಯ ಸಂದರ್ಶಿಸಿದ್ದರಿಂದ ಮಸೀದಿ ಕಟ್ಟಿದ್ದನೇ ಎಂಬ ಪ್ರಶ್ನೆ ಪ್ರಸಕ್ತವಲ್ಲ. ಆದ್ದರಿಂದ 1992ರಲ್ಲಿ ಬಿಜೆಪಿ-ಆರೆಸ್ಸೆಸ್ ಅಯೋಧ್ಯೆಯಲ್ಲಿ ದೇವಸ್ಥಾವನ್ನು ಕೆಡವಿದ್ದಾರೆ ಎಂದು ಅವರು ಆರೋಪಿಸಿದರು.
ತ್ರಿವಳಿ ತಲಾಕ್ ಹೆಸರಿನಲ್ಲಿ ಗಂಡನನ್ನು ಜೈಲಿಗೆ ಕಳುಹಿಸಿದರೆ ಪತ್ನಿಯಂದಿರು ಜೀವಿಸಲು ಎಲ್ಲಿಂದ ಹಣ ಬರುತ್ತದೆ ಎಂದು ಶಂಕರಾಚಾರ್ಯರು ಪ್ರಶ್ನಿಸಿದರು. ಆದ್ದರಿಂದ ತ್ರಿವಳಿ ತಲಾಕ್ ಮಸೂದೆ ಮಂಡಿಸುವ ಬದಲು ಬಹುಪತ್ನಿತ್ವ ನಿಷೇಧ ಕಾನೂನು ತಂದರೆ ಮುಸ್ಲಿಂ ಮಹಿಳೆಯರಿಗೆ ಸಹಕಾರವಾಗುತ್ತಿತ್ತು ಎಂದು ಅವರು ಹೇಳಿದರು.












