ಸನ್ಮಾರ್ಗ ವಾರ್ತೆ
ತೆಲಂಗಾಣದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಒಟ್ಟು 39 ಮುಸ್ಲಿಂ ಅಭ್ಯರ್ಥಿಗಳು ಗೆದ್ದಿರುವುದಾಗಿ ವರದಿಯಾಗಿದೆ. ಮುಸ್ಲಿಮರನ್ನು ರಾಜಕೀಯವಾಗಿ ನಿರ್ಲಕ್ಷಿಸಲಾಗ್ತಾ ಇದೆ ಎಂಬ ಆರೋಪದ ನಡುವೆಯೇ ಮುಸ್ಲಿಂ ಅಭ್ಯರ್ಥಿಗಳ ಈ ಗೆಲುವಿನ ವರದಿ ಬಂದಿದೆ.
ನಿಝಾಮಾಬಾದ್ ಜಿಲ್ಲೆಯಲ್ಲಿ ವಿವಿಧ ಪಕ್ಷಗಳಿಂದ ಒಟ್ಟು ಒಂಬತ್ತು ಮಂದಿ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಇದೇ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಗೆದ್ದಿರುವುದು ಬದಲಾವಣೆಯ ಸೂಚನೆಯಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟು 39 ಮಂದಿಯಲ್ಲಿ 10 ಮಂದಿ ಮಹಿಳೆಯರು ಜಯಗಳಿಸಿದ್ದಾರೆ.












