ಚೆನ್ನೈ, ಜೂ.28: ತಮಿಳ್ನಾಡಿನಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ನಿಂದಾಗಿ ಮನೆಯ ಪ್ರಿಡ್ಜ್ ಕಂಪ್ರೆಸರ್ ಸ್ಪೋಟವಾಗಿದ್ದು ಖಾಸಗಿ ಸುದ್ದಿ ಚ್ಯಾನೆಲ್ನ ವರದಿಗಾರ, ಪತ್ನಿ ಮತ್ತು ತಾಯಿ ಸ್ಫೋಟಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಸೆಲಯೂರ್ ನ ಫ್ಲಾಟ್ನಲ್ಲಿ ಮೂವರು ನಿದ್ದೆ ಮಾಡುತ್ತಿದ್ದಾಗ ಬುಧವಾರ ಮಧ್ಯರಾತ್ರೆ ಸ್ಫೋಟ ಸಂಭವಿಸಿತು. ವರದಿಗಾರ ಪ್ರಸನ್ನ(32), ಪತ್ನಿ ಅರ್ಚನಾ(30), ತಾಯಿ ರೇವತಿ(59) ಮೃತಪಟ್ಟ ದುರುದೃಷ್ಟವಂತರು.
ಕಂಪ್ರೆಸರ್ ಸ್ಫೋಟದ ಬಳಿಕ ಪ್ಲಾಸ್ಟಿಕ್ ಸಾಮಗ್ರಿಗಳು ಉರಿದು ದಟ್ಟ ಹೊಗೆಯಿಂದ ಮೂವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಸಮೀಪದ ಫ್ಲಾಟ್ನಲ್ಲಿದ್ದವರಿಗೆ ಸ್ಫೋಟ ನಡೆದದ್ದು ಅರಿವಾಗಿಲ್ಲ. ಬೆಳಗ್ಗೆ ಮನೆಯ ಕೆಲಸಗಾರರು ಬಂದು ಕಾಲಿಂಗ್ ಬೆಲ್ ಹೊಡೆದರೂ ತೆಗೆಯಲಿಲ್ಲ. ಕಿಟಕಿಯಲ್ಲಿ ನೋಡಿದಾಗ ಮನೆಯ ವಸ್ತುಗಳು ಸುಟ್ಟುಹೋಗಿದ್ದು ಕಂಡು ಬಂದಿದೆ. ನಂತರ ನೆರೆಯ ನಿವಾಸಿಗಳು ಬಾಗಿಲು ಒಡೆದು ಒಳಗೆ ಹೋಗಿ ನೋಡುವಾಗ ಪ್ರಸನ್ನ ರೇವತಿಯವರ ಮೃತದೇಹಗಳು ಸ್ವಾಗತ ಕೊಠಡಿಯಲ್ಲಿ ಕಂಡು ಬಂತು. ಅರ್ಚನಾರ ಮೃತದೇಹ ಮಲಗುವ ಕೋಣೆಯಲ್ಲಿ ಕಂಡು ಬಂತು. ಪ್ರಸನ್ನ ಮತ್ತು ರೇವತಿ ಬಾಗಿಲು ತೆಗೆದು ಹೊರಗೆ ಹೋಗಲು ಯತ್ನಿಸಿದಾಗ ಕುಸಿದು ಬಿದ್ದು ಮೃತಪಟ್ಟಿರಬಹುದು ಎಂದು ಪೊಲೀಸರು ಹೇಳಿದರು.












