ದಲಿತ ಬಾಲಕಿಯನ್ನು ಪ್ರೀತಿಸಿದ 22 ವರ್ಷದ ಯುವಕನನ್ನು ಕಡಿದು ಕೊಂದು ಹಾಕಿದ ಅಣ್ಣ

0
1584

ಕೋಯಮತ್ತೂರ್, ಜೂ. 28: ಮೆಟ್ಟುಪಾಳಂನ ಬಳಿ ಕೊಲೆ ನಡೆದಿದೆ. ದಲಿತ ಬಾಲಕಿಯನ್ನು 22 ವರ್ಷದ ಯುವಕ ಪ್ರೀತಿಸಿದ್ದರಿಂದ ಕೋಪಗೊಂಡ ಯುವಕನ ಅಣ್ಣ ಕುಡುಗೋಲಿನಿಂದ ಹೊಡೆದು ಕೊಂದಿದ್ದಾನೆ. ಯುವತಿಗೂ ಗಂಭೀರ ಗಾಯಗಳಾಗಿದ್ದು ಕೊಯಮತ್ತೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೂಲಿ ಕೆಲಸ ಮಾಡುವ ಕೆ. ಕನಕರಾಜು ಕೊಲೆಯಾದ ವ್ಯಕ್ತಿ. ಅಣ್ಣ ಕೆ.ವಿನೋದ್ ಕುಮಾರ್ ತಮ್ಮನನ್ನು ಕೊಂದು ಬುಧವಾರ ಮೆಟ್ಟುಪಾಲಯಂ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಕನಕರಾಜು ವಲಯಾರ್ ಸಮುದಾಯದ ವ್ಯಕ್ತಿಯಾಗಿದ್ದು ಅರುಂಧತಿಯಾರ್ ಸಮುದಾಯದ ದಲಿತ ಯುವತಿಯನ್ನು ಪ್ರೀತಿಸುತ್ತಿದ್ದನು. ಇವರ ಸಂಬಂಧವನ್ನು ವಿನೋದ್ ಕುಮಾರ್ ವಿರೋಧಿಸುತ್ತಿದ್ದ. ಆದರೆ ಕರುಪ್ಪುಸ್ವಾಮಿಯ ಬೆಂಬಲದಲ್ಲಿ ಕನಕರಾಜು ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದ.

ಇದನ್ನು ತಿಳಿದು ವಿನೋದ್ ಕುಮಾರ್ ಪ್ರೇಮಿಗಳ ಮೇಲೆ ಕುಡುಗೋಲುನಿಂದ ಕಡಿದಿದ್ದಾನೆ. ತಲೆಗೆ ಪೆಟ್ಟು ಬಿದ್ದ ಕನಕರಾಜು ಘಟನಾ ಸ್ಥಳದಲ್ಲೇ ಅಸುನೀಗಿದನು. ಯುವತಿಯ ತಲೆಗೂ, ಕಣ್ಣಿನ ಭಾಗಕ್ಕೂ ಗಾಯಗಳಾಗಿವೆ. ಮಂಗಳವಾರ ಸಂಜೆ ಘಟನೆ ನಡೆದಿದೆ. ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವುದರಿಂದ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.