ಟೋಲ್ ನೀಡದೆ ತಡೆಯಲು ಬಂದ ಸಿಬ್ಬಂದಿಯನ್ನು ದೂಡಿಹಾಕಿ ಹೋದ ಕಾರು-ವೀಡಿಯೊ

0
837

ಗುರುಗ್ರಾಮ, ಜೂ. 28: ಕಳೆದ ವಾರ ದಿಲ್ಲಿಯ ಟೋಲ್ ಬೂತ್‍ನ ಮಹಿಳಾ ಸಿಬ್ಬಂದಿಗೆ ಹಲ್ಲೆ ನಡೆದಿತ್ತು. ಈಗ ಇದೇ ಟೋಲ್‍ಬೂತ್‍ನಲ್ಲಿ ಟೋಲ್ ನೀಡದ್ದಕ್ಕಾಗಿ ತಡೆಯಲು ಬಂದ ಸಿಬ್ಬಂದಿಯನ್ನು ಬೋನೆಟ್‍ನಲ್ಲಿ ಹಾಕಿ ಕಾರು ಹೊರಟುಹೋಗಿದೆ. ಗುರುಗ್ರಾಮದ ಬೂತ್‍ನಲ್ಲಿ ಮಂಗಳವಾರ ಘಟನೆ ನಡೆಯಿತು. ಟೋಲ್ ನೀಡದೆ ಹೋದ ಕಾರನ್ನು ತಡೆಯಲು ನೋಡಿದಾಗ ಘಟನೆ ನಡೆದಿದೆ.

ಕೆಲವು ಮೀಟರ್ ಗಳ ವರೆಗೆ ಸಿಬ್ಬಂದಿಯನ್ನು ಕಾರು ಬೊನೆಟ್‍ನಲ್ಲಿ ಹಾಕಿ ಕೊಂಡು ಹೋಗಿದೆ. ಕಾರು ನಿಲ್ಲಿಸಿದ ಬಳಿಕ ಸಿಬ್ಬಂದಿ ಬೊನೆಟ್‍ನಿಂದ ಇಳಿಯುವ ದೃಶ್ಯಗಳನ್ನು ಕಾಣಬಹುದು. ಇಳಿದ ಬಳಿಕವೂ ಕಾರನ್ನು ತಡೆಯಲು ಟೋಲ್ ಸಿಬ್ಬಂದಿ ಯತ್ನಿಸುತ್ತಿದ್ದಾನೆ. ಈತನನ್ನು ಕ್ಯಾರು ಮಾಡದೆ ಕಾರನ್ನು ತೆಗೆದುಕೊಂಡು ಚಾಲಕ ಹೊರಟು ಹೋಗಿದ್ದಾನೆ. ಪೊಲೀಸರಿಗೆ ದೂರು ನೀಡಲಾಗಿದ್ದು ಕಾರು ಚಾಲಕನನ್ನು ನಂತರ ಪೊಲೀಸರು ಬಂಧಿಸಿದರು. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಕಾರನ್ನು ಪತ್ತೆಹಚ್ಚಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದರು. ಕಳೆದ ಶುಕ್ರವಾರ ಇದೇ ಟೋಲ್ ಬೂತ್‍ನಲ್ಲಿ ಚಾಲಕನೊಬ್ಬ ಟೋಲ್‍ಗೇಟ್‍ನ ಮಹಿಳಾ ಸಿಬ್ಬಂದಿಗೆ ಹಲ್ಲೆ ನಡೆಸಿದ್ದನು.