ಸನ್ಮಾರ್ಗ ವಾರ್ತೆ
ಬಾಂಗ್ಲಾದೇಶದ ವಿದ್ಯಾರ್ಥಿ ಹೋರಾಟದ ನಾಯಕರಾಗಿದ್ದ ಉಸ್ಮಾನ್ ಹಾದಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಿದ ಬಳಿಕ ಇದೀಗ ಇನ್ನೋರ್ವ ವಿದ್ಯಾರ್ಥಿ ಹೋರಾಟಗಾರ ಮುತ್ತಲಿಬ್ ಶಿಕ್ದರ್ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಇವರು ನ್ಯಾಷನಲ್ ಸಿಟಿಜನ್ ಪಾರ್ಟಿ ಕುಲ್ನಾ ಎಂಬ ಪಕ್ಷದ ನಾಯಕನಾಗಿದ್ದರು. ಫೆಬ್ರವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸುವುದಾಗಿ ಹೇಳಿ ಪ್ರಚಾರದಲ್ಲಿ ತೊಡಗಿದ್ದ ಹಾದಿಯನ್ನು ಕೂಡ ಇದೇ ರೀತಿಯಲ್ಲಿ ಡಿಸೆಂಬರ್ 12ರಂದು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.
ಆರೋಪಿಗಳ ಬಂಧನ ಆಗದಿದ್ದರೂ ಫೈಸಲ್ ಕರೀಂ ಮಸೂದ್ ಎಂಬವ ಮುಖ್ಯ ಆರೋಪಿ ಎಂದು ಅನುಮಾನಿಸಲಾಗಿದೆ.
ಈ ಎರಡೂ ಹತ್ಯೆಗಳ ಹಿಂದೆ ರಾಜಕೀಯ ಕಾರಣಗಳು ಇವೆ ಎಂದು ಪೊಲೀಸರು ಅನುಮಾನಿಸಿದ್ದಾರೆ.
ಉಸ್ಮಾನ್ ಹಾದಿಯ ಹತ್ಯೆಯ ಬಳಿಕ ಚಿತ್ತಗಾಂಗ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮುಂದೆ ಪ್ರತಿಭಟನೆ ನಡೆದಿತ್ತು.












