ಗಾಝಾದ ನಾಶಕ್ಕೆ ಮೌನ ಯುದ್ಧವನ್ನು ಆರಂಭಿಸಿರುವ ಇಸ್ರೇಲ್

0
555

ಸನ್ಮಾರ್ಗ ವಾರ್ತೆ

ಗಾಝಾದ ಮೇಲೆ ಬಹಿರಂಗ ಯುದ್ಧವನ್ನು ನಿಲ್ಲಿಸಿರುವ ಇಸ್ರೇಲ್ ಇದೀಗ ಮೌನ ಯುದ್ಧವನ್ನು ಆರಂಭಿಸಿದೆ. ಗಾಝಾದ ಬಹುತೇಕ ಕಟ್ಟಡಗಳು ಧ್ವಂಸವಾಗಿದ್ದು ಇದೀಗ ಇವುಗಳನ್ನು ಮರಳಿ ಕಟ್ಟುವುದಕ್ಕೆ ಬೇಕಾದ ಅನುಮತಿಯನ್ನು ನೀಡದೆ ಸತಾಯಿಸುತ್ತಿದೆ. ಗಾಝಾದ ಜನರನ್ನು ಸತಾಯಿಸುವ ಉದ್ದೇಶದಿಂದ ಅದಕ್ಕೆ ಪೂರಕವಾದ ಎಲ್ಲಾ ಕ್ರೌರ್ಯಗಳನ್ನು ಮುಂದುವರಿಸಿದೆ.

2025ರಲ್ಲಿ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ನಡೆಸಿದ ಕಾರ್ಯಾಚರಣೆಯು 1967ರ ಯುದ್ದಕ್ಕಿಂತಲೂ ಭೀಕರವಾಗಿದ್ದು 50,000 ಮಂದಿ ಫೆಲಸ್ತೀನಿಯರನ್ನು ಅವರ ಮನೆಯಿಂದ ಹೊರ ಹಾಕಲಾಗಿದೆ.

ಇಸ್ರೇಲಿ ಸೇನೆಯು ಜೆನಿನ್ ಮತ್ತು ತುಲ್ಕರಿನಲ್ಲಿ ಇರುವ ನಿರಾಶ್ರಿತ ಶಿಬಿರದ ಟೆಂಟುಗಳನ್ನು ನಾಶ ಮಾಡಿದೆ. ಈ ಮೂಲಕ ಅವರು ಮರಳಿ ಬರದಂತೆ ನೋಡಿಕೊಂಡಿದೆ.

ಅಲ್ಲದೆ ವಿದ್ಯುತ್ ವ್ಯವಸ್ಥೆಯನ್ನೇ ಅದು ತಾರು ಮಾರುಗೊಳಿಸಿದೆ. ಇನ್ಫ್ರಾಸ್ಟ್ರಕ್ಚರ್ ಗಳನ್ನು ನಾಶ ಮಾಡಿದೆ. ಜೆನಿನ್ ನಗರದ 70% ರಸ್ತೆಗಳನ್ನು ಬುಲ್ಡೋಜರ್ ಮಾಡಿ ಹಾಳು ಮಾಡಲಾಗಿದೆ. ಹೆಚ್ಚಿನ ನೀರಿನ ಪೈಪುಗಳು ನಾಶವಾಗಿವೆ . ಇದರಿಂದ ಮಿಲಿಯಾ0ತರ ಡಾಲರ್ ಮೊತ್ತದ ಸಂಪತ್ತು ನಾಶವಾಗಿದೆ.

ಬಾಂಬು ಹಾಕಿ ನಾಶ ಮಾಡಿದ್ದನ್ನಷ್ಟೇ ಜಗತ್ತು ನೋಡಿದೆ. ಆದರೆ ಈಗ ಮೌನವಾಗಿ ಇಸ್ರೇಲ್ ಅಲ್ಲಿನ ಮೂಲಭೂತ ಸೌಲಭ್ಯವನ್ನೇ ನಾಶ ಮಾಡಿ ಜನರನ್ನು ಪ್ರದೇಶದಿಂದ ಶಾಶ್ವತವಾಗಿ ವಲಸೆ ಹೋಗುವಂತೆ ಮಾಡುತ್ತಿದೆ.