ಮಾಲ್ಡ, ಜು.2: ಪಶ್ಚಿಮಬಂಗಾಳದ ಮಾಲ್ಡದಲ್ಲಿ 20 ವರ್ಷದ ಮುಸ್ಲಿಂ ಯುವಕನ್ನು ಬೈಕ್ ಕಳ್ಳ ಎಂದು ಆರೋಪಿಸಿ ಜನರ ಗುಂಪು ಹೊಡೆದು ಕೊಂದು ಹಾಕಿದೆ. ತೀವ್ರ ಪ್ರತಿಭಟನೆಯ ನಡುವೆ ಸಾವೂಲ್ ಶೇಕ್ನ ಮೃತದೇಹವನ್ನು ಕೊಲ್ಕತಾದ ಆಸ್ಪತ್ರೆಗೆ ತರಲಾಯಿತು. ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಾಲ್ಡಾ ಎಸ್ಪಿ ಅಲೋಕ್ ರಜೊರಿಯ ಹೇಳಿದರು. ಬೈಷ್ಣಬ್ ನಗರ್ ಬಝಾರಿನಲ್ಲಿ ಬುಧವಾರ ಈ ಘಟನೆ ನಡೆದಿದೆ.
ಶೇಕ್ ಗೆ ಹೊಡೆಯುತ್ತಿರುವ ದೃಶ್ಯಗಳು ವ್ಯಾಪಕವಾಗಿ ಪ್ರಚಾರವಾಗಿವೆ. ಗಂಭೀರ ಗಾಯಗೊಂಡ ಶೇಕ್ ಗೆ ಮೊದಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿಂದ ಮಾಲ್ಡಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಎಸ್ಎಸ್ಕೆ ಆಸ್ಪತ್ರೆಗೆ ದಾಖಲಿಸಲಾದರೂ ಶನಿವಾರ್ ಶೇಕ್ ಮೃತಪಟ್ಟಿದ್ದಾರೆ.
ಈ ಹಿಂದೆ ಕಳ್ಳತನ ಆರೋಪದಲ್ಲಿ ಶೇಕ್ ನನ್ನು ಬಂಧಿಸಲಾಗಿತ್ತು ಎನ್ನಲಾಗಿದೆ. ಶೇಕ್ ನ ತಾಯಿ ನೀಡಿದ ದೂರಿನಲ್ಲಿ ಕೇಸು ದಾಖಲಿಸಿ ತನಿಖೆ ನಡೆಯುತ್ತಿದೆ. ಜನರು ಬೈಷ್ಣಬ್ ನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮೃತದೇಹ ಸಂಸ್ಕಾರ ನಡೆಸದೆ ರಾಷ್ಟ್ರೀಯ ಹೆದ್ದಾರಿಗೆ ತಡೆಯೊಡ್ಡಿದ್ದಾರೆ.












