ಅಬ್ದುಲ್ಲ ಅಬು ಅರಾನ್, ಐಮನ್ ಅಲ್ ಮದೂನ್ ಎಂಬ ಶಿಶುಗಳ ಸಹಿತ 2019ರಲ್ಲಿ 84 ಫೆಲಸ್ತೀನಿಯರ ಹತ್ಯೆ ಮಾಡಿದ ಇಸ್ರೇಲ್

0
1651

ಜೆರುಸಲೇಂ, ಜು. 2: ಇಸ್ರೇಲಿನ ದಾಳಿಯಿಂದ 2019ರಲ್ಲಿ ಈವರೆಗೆ 84 ಫೆಲೆಸ್ತೀನಿಯರು ಹತ್ಯೆಯಾಗಿದ್ದಾರೆ. ಇವರಲ್ಲಿ 19 ಮಕ್ಕಳು, ಎಂಟು ಮಹಿಳೆಯರು ಸೇರಿದ್ದಾರೆ. ಫೆಲಸ್ತೀನಿನ ಸಂಘಟನೆಯೊಂದನ್ನು ಉದ್ಧರಿಸಿ ಅಲ್‍ ಕುದ್ಸ್ ಪತ್ರಿಕೆ ಇದನ್ನು ವರದಿ ಮಾಡಿದ್ದು ಸಂಘಟನೆಯ ವರದಿಯ ಪ್ರಕಾರ 59 ಮಂದಿ ಗಾಝದಲ್ಲಿ, 25 ಮಂದಿ ವೆಸ್ಟ್ ಬ್ಯಾಂಕ್‍ನಲ್ಲಿ ಹಾಗೂ ಜೆರುಸಲೇಂನಲ್ಲಿ ಇಸ್ರೇಲ್ ಸೇನೆ ಕೊಂದು ಹಾಕಿದೆ.

ಇಸ್ರೇಲಿನಿಂದ ಕೊಲೆಯಾದವರಲ್ಲಿ ಇಬ್ಬರು ಪುಟ್ಟ ಮಕ್ಕಳೂ ಸೇರಿದ್ದಾರೆ. ಮೇ 4, 5 ತಾರೀಕಿಗೆ ಅಬ್ದುಲ್ಲ ಅಬು ಅರಾನ್, ಐಮನ್ ಅಲ್ ಮದೂನ್ ಎಂಬ ಕೆಲವೇ ದಿವಸಗಳ ಪ್ರಾಯದ ಶಿಶುಗಳನ್ನು ಇಸ್ರೇಲ್ ಕೊಂದು ಹಾಕಿತು. ಈ ವರ್ಷ 12 ಫೆಲಸ್ತೀನಿ ಮೃತದೇಹಗಳನ್ನು ಇಸ್ರೇಲ್ ಸೇನೆ ಸಂಬಂಧಿಕರಿಗೆ ಬಿಟ್ಟುಕೊಡಲಿಲ್ಲ. ಇದುವರೆಗೆ 266 ಮೃತದೇಹಗಳನ್ನು ಇಸ್ರೇಲ್ ಸರಕಾರ ಮೃತರ ಸಂಬಂಧಿಕರಿಗೆ ಬಿಟ್ಟು ಕೊಡದೆ ತಾನೇ ದಫನ ಮಾಡಿದೆ.