ತಕ್ಷಣ ಇರಾನ್ ತೊರೆಯಿರಿ: ತನ್ನ ನಾಗರಿಕರಿಗೆ ಅಮೆರಿಕ ಕರೆ

0
462

ಸನ್ಮಾರ್ಗ ವಾರ್ತೆ

ತಕ್ಷಣ ಇರಾನ್ ತೊರೆಯಬೇಕು ಎಂದು ತನ್ನ ಪ್ರಜೆಗಳಿಗೆ ಅಮೆರಿಕ ಕರೆ ನೀಡಿದೆ. ಲಭ್ಯ ವಾಹನವನ್ನು ಬಳಸಿ ಆದಷ್ಟು ಬೇಗ ಇರಾನಿನಿಂದ ಹೊರಬರಬೇಕು ಎಂದು ಅಮೆರಿಕಾ ತನ್ನ ನಾಗರಿಕರಿಗೆ ಕರೆ ನೀಡಿದೆ. ಇರಾನಿನ ಜೊತೆ ಅಣ್ವಸ್ತ್ರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿರುವುದರ ಮಧ್ಯೆಯೇ ಈ ಆದೇಶ ನೀಡಿರುವುದು ಕುತೂಹಲಕರವಾಗಿದೆ.

ಇರಾನಿನಲ್ಲಿ ಪ್ರತಿಭಟನೆ ನಡೆಯುತ್ತಿರುವುದು ಮತ್ತು ಮಾತುಕತೆಗಳಲ್ಲಿ ಪ್ರಗತಿ ಕಾಣದಿರುವುದು ಹಾಗೂ ವಿಮಾನ ಸೇವೆಗಳಲ್ಲಿ ವ್ಯತ್ಯಾಸ ಉಂಟಾಗುತ್ತಿರುವುದನ್ನು ಕೂಡ ಈ ಕರೆಗೆ ಕಾರಣವಾಗಿ ನೀಡಲಾಗಿದೆ.

ಇರಾನಿನ ಜೊತೆಗೆ ಮಾತುಕತೆ ಯಶಸ್ವಿಯಾಗದಿದ್ದರೆ ಕಠಿಣ ಕ್ರಮವನ್ನು ಇರಾನ್ ಎದುರಿಸಬೇಕಾದೀತು ಎಂದು ಟ್ರಂಪ್ ಈಗಾಗಲೇ ಹೇಳಿದ್ದಾರೆ.

ಇರಾನಿನ ವಿಮಾನ ಸಂಸ್ಥೆಗಳು ತಮ್ಮ ಸರ್ವಿಸ್ ರದ್ದು ಮಾಡುವ ಸಾಧ್ಯತೆಯೂ ಇದೆ. ಆದ್ದರಿಂದ ಅರ್ಮೇನಿಯ ತುರ್ಕಿ ಮುಂತಾದ ರಾಷ್ಟ್ರಗಳಿಗೆ ಸಮುದ್ರ ದಾರಿಯಾಗಿ ಹೋಗಿ ಎಂದು ಅಮೆರಿಕ ತಿಳಿಸಿದೆ.

ಒಮಾನಿನಲ್ಲಿ ಇರಾನ್ ಮತ್ತು ಅಮೆರಿಕದ ನಡುವೆ ಅಣ್ವಸ್ತ್ರಕ್ಕೆ ಸಂಬಂಧಿಸಿ ಚರ್ಚೆ ನಡೆಯುವುದಕ್ಕೆ ಸಿದ್ಧತೆಗಳು ನಡೆಯುತ್ತಿರುವುದರ ಸಂದರ್ಭದಲ್ಲಿಯೇ ಈ ಹೇಳಿಕೆ ಹೊರ ಬಿದ್ದಿದೆ.