ಹೊಸದಿಲ್ಲಿ, ಜು. 2: ಅಲ್ ಇಂಡಿಯ ಪಸ್‍ಮಂದ ಮುಸ್ಲಿಂ ಮಹಾಝ್ ರಾಷ್ಟ್ರೀಯ ಅಧ್ಯಕ್ಷ ಅಲಿ ಅನ್ವರ್ ಅನ್ಸಾರಿ ಮುಸ್ಲಿಮರು ಮುಸ್ಲಿಂ ಸಿಂಡ್ರೋಮ್‍ನಿಂದ ಹೊರಗೆ ಬರಬೇಕೆಂದು ಹೇಳಿದ್ದಾರೆ. ಅಲ್ಪಸಂಖ್ಯಾತರು ಎಂಬ ಶಬ್ದ ಹೀನಭಾವವನ್ನು ಸೃಷ್ಟಿಸುತ್ತದೆ. ನಾವು ಈ ದೇಶದಲ್ಲಿ ಬಹುಜನ ಸಮಾಜದ ಭಾಗವಾಗಿದ್ದೇವೆ. ನಾವು ಇಲ್ಲಿನ ನಿವಾಸಿಗಳು ಎಂದು ಅವರು ಹೇಳಿದರು.
ಮೊದಲಿನಿಂದಲೂ ನಮ್ಮ ಘೋಷಣೆ ಹಿಂದುಳಿದವರು ದಲಿತರು ಸಮಾನರು. ಹಿಂದೂವಾಗಿರಲಿ. ಮುಸ್ಲಿಂ ಆಗಿರಲಿ ಎಂದು ಅಲಿ ಅನ್ವರ್ ಅನ್ಸಾರಿ ನೆನಪಿಸಿದರು. ಅವರು ರವಿವಾರ ಸ್ವಾತಂತ್ರ್ಯ ಯೋಧ ಅಬ್ದುಲ್ ಕಯ್ಯೂಮ್ ಅನ್ಸಾರಿ, ಪರಮಚಕ್ರ ವಿಜೇತ ಅಬ್ದುಲ್ ಹಮೀದ್‍ರ ಹುಟ್ಟಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದರು.
ನಾವು ರಾಜಕೀಯ ಗುಲಾಮರಲ್ಲ. ಜನಸಂಖ್ಯೆಯ ಭಾಗವಾಗಿದ್ದೇವೆ. ನಾವು ಎಲ್ಲ ರೀತಿಯ ಉಗ್ರವಾದವನ್ನು ಮತ್ತು ಕೋಮುವಾದವನ್ನು ವಿರೋಧಿಸುತ್ತೇವೆ. ಧರ್ಮವನ್ನು ರಾಜಕೀಯದಿಂದ ಹೊರಗಿಡಬೇಕು. ಜನಸಂಖ್ಯಾಧಾರಿತವಾಗಿ ಎಲ್ಲರಿಗೂ ಪಾಲ್ದಾರಿಕೆ ಸಿಗಬೇಕು. ನಾವು ರಾಜಕೀಯ ರೀತಿಯಲ್ಲಿ ಕುರ್ಚಿಯ ಗುಲಾಮರಲ್ಲ ಎಂದು ಅಲಿ ಅನ್ವರ್ ಹೇಳಿದರು.












