ಸಬ್ಸಿಡಿ ಅಡುಗೆ ಅನಿಲದ ದರ 3 ರೂ. ಇಳಿಕೆ

0
1127

ಹೊಸದಿಲ್ಲಿ, ಜು.2: ಗೃಹಿಣಿಯರಿಗೆ ಶುಭ ಸುದ್ದಿಯೊಂದು ವರದಿಯಾಗಿದ್ದು ಸಬ್ಸಿಡಿಯ ಅಡಿಗೆ ಅನಿಲಕ್ಕೆ 3.02 ರೂಪಾಯಿ ಕಡಿಮೆಯಾಗಿದೆ. ಇನ್ನು ಮುಂದೆ ಸಬ್ಸಿಡಿ ಅಡುಗೆ ಅನಿಲ 14.2 ಕೆ.ಜಿ. ಸಿಲಿಂಡರ್ ಗೆ 492.04 ರೂಪಾಯಿ ದರ ಇರಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದರ ಇಳಿಕೆಯಾಗಿದ್ದರಿಂದ ಅಡುಗೆ ಅನಿಲದ ದರ ಇಳಿಕೆ ಮಾಡಲಾಯಿತು ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮೂಲಗಳು ತಿಳಿಸಿವೆ.

ಆದರೆ ಪಡಿತರವಾಗಿ ವಿತರಿಸುವ ಸಿಮೆ ಎಣ್ಣೆಗೆ 25 ಪೈಸೆ ಹೆಚ್ಚಾಗಿದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ 2.01 ರೂಪಾಯಿ ಕಡಿಮೆಯಾಗಿದ್ದು ಈಗಿನ ದರ 61.92 ಆಗಿದೆ.