ಕಾಶ್ಮೀರಿಗಳನ್ನು ಯಾವ ಬೆಲೆತೆತ್ತಾದರೂ ಭಾರತದಿಂದ ಹೊರಹಾಕಲು ವಲ್ಲಭಬಾಯಿ ಪಟೇಲ್ ಬಯಸಿದ್ದರು- ಶಾಗೆ ಆರ್ ಜೆ ಡಿ ತಿರುಗೇಟು

0
717

ಹೊಸದಿಲ್ಲಿ, ಜು. 2: ಕೇಂದ್ರ ಗೃಹ ಸಚಿವ ಅಮಿತ್‍ ಶಾ ಕಳೆದ ಶುಕ್ರವಾರ ಲೋಕಸಭೆಯಲ್ಲಿ ಜಮ್ಮು ಕಾಶ್ಮೀರದ ಇಂದಿನ ಸಮಸ್ಯೆಗಳಿಗೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂರನ್ನು ಹೊಣೆಗಾರ ಎಂದಿದ್ದರು. ವಲ್ಲಭಬಾಯಿ ಪಟೇಲ್ ದೇಶದ ಪ್ರಥಮ ಪ್ರಧಾನಿಯಾಗಿರುತ್ತಿದ್ದರೆ ಕಾಶ್ಮೀರದ ಇಂದಿನ ಸಮಸ್ಯೆ ಇರುತ್ತಿರಲಿಲ್ಲ ಎಂದು ಅಮಿತ್ ಶಾ ಹೇಳಿದ್ದರು. ಪ್ರಥಮ ಗೃಹ ಸಚಿವ ವಲ್ಲಭಬಾಯಿ ಪಟೇಲ್‍ರನ್ನು ನೆಹರೂ ವಿಶ್ವಾಸಕ್ಕೆ ತೆಗೆದುಕೊಂಡಿರುತ್ತಿದ್ದರೆ ಇಡೀ ಕಾಶ್ಮೀರ ನಮ್ಮದಾಗಿರುತ್ತಿತ್ತು ಎಂದೂ ಶಾ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಲಾಲು ಪ್ರಸಾದ್ ಯಾದವ್‍ ರ ರಾಷ್ಟ್ರೀಯ ಜನತಾದಳ ಶಾರ ವಿಚಾರವನ್ನು ತೀವ್ರವಾಗಿ ವಿರೋಧಿಸಿದೆ.

ಇಂಡಿಯ ಟಿವಿ ನ್ಯೂಸ್ ಡಾಟ್ ಕಾಮ್ ಪ್ರಕಾರ ರಾಷ್ಟ್ರೀಯ ಜನತಾ ದಳ ಅಮಿತ್ ಶಾರ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದೆ. ಒಂದುವೇಳೆ ಪಟೇಲ್ ಪ್ರಧಾನಿಯಾಗುತ್ತಿದ್ದರೆ ಖಂಡಿತವಾಗಿಯೂ ಕಾಶ್ಮೀರ ಸಮಸ್ಯೆ ಇರುತ್ತಿರಲಿಲ್ಲ. ಯಾಕೆಂದರೆ ಅದು ಒಂದು ತುಂಡು ಕೂಡ ನಮ್ಮದಾಗಿರುತ್ತಿರಲಿಲ್ಲ ಎಂದಿದೆ.

ಆರ್‍ಜೆಡಿ ತನ್ನ ಟ್ವಿಟರ್ ನಲ್ಲಿ ‘ ಅಮಿತ್‍ಶಾ ಸರಿಯಾಗಿ ಹೇಳಿದರು. ಒಂದು ವೇಳೆ ಪಟೇಲ್ ಪ್ರಧಾನಿಯಾಗಿರುತ್ತಿದ್ದರೆ ಕಾಶ್ಮೀರ ಸಮಸ್ಯೆ ಇರುತ್ತಿರಲಿಲ್ಲ. ಯಾಕೆಂದರೆ ಕಾಶ್ಮೀರ ನಮ್ಮದಾಗಿರುತ್ತಿರಲಿಲ್ಲ. ಅದರ ಒಂದು ತುಂಡು ಕೂಡ ನಮ್ಮದಾಗಿ ಉಳಿಯುತ್ತಿರಲಿಲ್ಲ. ಪಟೇಲ್ ಕಾಶ್ಮೀರವನ್ನು ಭಾರತದಿಂದ ಹೊರಗಿಡಲು ಬಯಸುತ್ತಿದ್ದರು. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡುವ ವಿಚಾರ ಅವರದ್ದಾಗಿತ್ತು. ಸಂಘಪರಿವಾರ ತಿರುಚಿದ ಇತಿಹಾಸವನ್ನು ಓದುತ್ತಾರೆ” ಎಂದು ಟ್ವಿಟರ್ ಹ್ಯಾಂಡಲ್‍ ನಲ್ಲಿ ಆರ್‍ಜೆಡಿ ಬರೆದಿದೆ.