ಶಾರ್ಜದ ಆಡಳಿತಗಾರನ ಪುತ್ರ ಶೇಖ್ ಖಾಲಿದ್ ನಿಧನ; ಯುಎಇಯಲ್ಲಿ 3 ದಿವಸ ಶೋಕಾಚರಣೆ

0
660

ಶಾರ್ಜ, ಜು. 3: ನಿನ್ನೆ ಲಂಡನ್‍ನಲ್ಲಿ ಶಾರ್ಜದ ಆಡಳಿತಗಾರ ಡಾ. ಶೇಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್‍ಕಾಸಿಮಿಯ ಪುತ್ರ ಶೇಖ್ ಖಾಲಿದ್ ಬಿನ್ ಅಲ್‍ಖಾಸಿಂರ ಮೃತದೇಹದ ಸಂಸ್ಕಾರ ಇಂದು (ಬುಧವಾರ) ಜುಬೈಲ್ ನ ಕನ್ರಸ್ತಾನದಲ್ಲಿ ನಡೆಯಲಿದೆ. ಮರಣಾನಂತರ ಕಾರ್ಯಕ್ರಮ ಮತ್ತು ಜನಾಝ ನಮಾಝ್ ಬೆಳಗ್ಗೆ 9 ಗಂಟೆಗೆ ಶಾರ್ಜ ಕಿಂಗ್ ಫೈಝಲ್ ಆಸ್ಪತ್ರೆಯಲ್ಲಿ ಅರಂಭಗೊಳ್ಳುತ್ತಿದೆ. ನಿನ್ನೆ ಲಂಡನ್‍ನಲ್ಲಿ ಶೇಖ್ ಖಾಲಿದ್ ಮೃತಪಟ್ಟಿದ್ದರು.

ಯುಎಇಯಲ್ಲಿ ಇಂದಿನಿಂದ ಮೂರು ದಿವಸಗಳ ಅಧಿಕೃತ ಶೋಕಾಚರಣೆ ಘೋಷಿಸಲಾಗಿದೆ. ನಿಧನರಾದ ಶೇಖ್ ಖಾಲಿದ್ ಶಾರ್ಜ ನಗರಯೋಜನೆ ಸಮಿತಿಯ ಅಧ್ಯಕ್ಷರು ಕೂಡ ಆಗಿದ್ದಾರೆ.