ಹೊಸದಿಲ್ಲಿ,ಜು.3: ಪ್ರತಿಯೊಬ್ಬ ನುಸುಳುಕೋರರನ್ನು ಹೊರತಳ್ಳಲು ಸರಕಾರ ಪ್ರತಿಬದ್ಧವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನಾವು ಅಸ್ಸಾಂ ಪೌರತ್ವ ಪಟ್ಟಿಯಲ್ಲಿರುವ ನುಸುಳುಕೋರರರನ್ನು ಹುಡುಕಿ ಕಂಡುಹಿಡಿದು ದೇಶದಿಂದ ಹೊರಹಾಕುತ್ತೇವೆ ಮತ್ತು ಹಿಂದೂ ನಿರಾಶ್ರಿತರಿಗೆ ಸರಕಾರ ಪೌರತ್ವ ನೀಡಲಿದೆ ಎಂದು ಅವರು ಹೇಳಿದರು.
ಇದಕ್ಕಿಂತ ಮೊದಲು ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಅವಧಿಯನ್ನು ಆರು ತಿಂಳು ಹೆಚ್ಚಿಸಿರುವುದು ಮತ್ತು ಜಮ್ಮು ಕಾಶ್ಮೀರ ಮೀಸಲಾತಿ ಮಸೂದೆಯ ಚರ್ಚೆಯಲ್ಲಿ ಅವರು ರಾಜ್ಯ ಸಭೆಯಲ್ಲಿ ಉತ್ತರಿಸುತ್ತಿದ್ದರು. ಕಾಶ್ಮೀರ ಕಣಿವೆ ಸಹಿತ ಜಮ್ಮುಕಾಶ್ಮೀರದ ಪ್ರತಿಯೊಂದು ಭಾಗದ ಜನರ ಅಭಿವೃದ್ಧಿಗೆ ನರೇಂದ್ರ ಮೋದಿ ಸರಕಾರ ಬದ್ಧವಾಗಿದೆ. ದೇಶ ಭಯೋತ್ಪಾದನೆ ಮತ್ತು ಪ್ರತ್ಯೇಕವಾದವನ್ನು ಖಂಡಿತ ಸಹಿಸದು. ಇಂತಹ ಜನರು ಕಠೋರ ಮತ್ತು ಕಾಠಿಣ್ಯವನ್ನು ಎದುರಿಸಬೇಕಾಗುವುದು ಎಂದು ಅಮಿತ್ ಶಾ ಹೇಳಿದರು. ಜಮ್ಮುಕಾಶ್ಮೀರ ಚುನಾವಣೆಗೆ ಚುನಾವಣಾ ಆಯೋಗ ಸಿದ್ಧವಾದರೆ ಕೇಂದ್ರ ಸರಕಾರ ಒಂದು ದಿನ ಕೂಡ ತಡಮಾಡುವುದಿಲ್ಲ ಎಂದೂ ಅಮಿತ್ ಶಾ ಹೇಳಿದರು.
देश में घुसपैठ रोकने के लिए सरकार प्रतिबद्ध है।
हम NRC लाकर घुसपैठियों को चुन-चुनकर बाहर निकालेंगे।
हिंदू शरणार्थियों के लिए भी सरकार कमिटेड है। हम सिटिजनशिप अमेंडमेंट बिल लाकर सभी हिंदू शरणार्थियों को भारत की नागरिकता देंगे: श्री @AmitShah pic.twitter.com/cVibbU8Hgg
— BJP (@BJP4India) July 2, 2019












