ಪುತ್ತೂರು: ವಿದ್ಯಾರ್ಥಿನಿ ಮೇಲೆ ಸಹಪಾಠಿಗಳಿಂದ ಸಾಮೂಹಿಕ ಅತ್ಯಾಚಾರ: ಎಸ್​ಪಿಯಿಂದ ತನಿಖೆಗೆ ಆದೇಶ, ವಿಡಿಯೋ ಹಂಚದಂತೆ ಎಚ್ಚರಿಕೆ

0
3867

ಪುತ್ತೂರು: ಸಹಪಾಠಿ ವಿದ್ಯಾರ್ಥಿನಿಗೆ ಮಾದಕ ವಸ್ತು ನೀಡಿ ಮೂವರು ವಿದ್ಯಾರ್ಥಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ‌ ಎಸಗಿದ್ದು ಮತ್ತು ಅದನ್ನು ವೀಡಿಯೋ ಮಾಡಿದ ಆರೋಪ ಕೇಳಿಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ವೈರಲ್‌ ಮಾಡಿದ್ದಾರೆ.

ಈ ಘಟನೆ ದ ಕ ಜಿಲ್ಲೆಯ ಪುತ್ತೂರು ಎಂಬಲ್ಲಿನ ಅಸುಪಾಸಿನಲ್ಲಿ ನಡೆದಿದೆ. ವಿದ್ಯಾರ್ಥಿಗಳು ಪುತ್ತೂರು ಸಮೀಪದ ಉಪ್ಪಿನಂಗಡಿ ಪ್ರದೇಶದವರು ಎಂದು ಶಂಕಿಸಲಾಗಿದೆ. ಪ್ರಜ್ಞೆ ಕಳೆದುಕೊಂಡಂತಹ ಸ್ಥಿತಿಯಲ್ಲಿದ್ದ ಸಹಪಾಠಿ ವಿದ್ಯಾರ್ಥಿನಿ ಮೇಲೆ ಮೂವರು ಕಾಲೇಜು ವಿದ್ಯಾರ್ಥಿಗಳು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ದ ಕ ಎಸ್​ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಎಚ್ಚರಿಕೆ ನೀಡಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ. ಅವರು ನೀಡಿರುವ ಎಚ್ಚರಿಕೆಯ ಸಂದೇಶ ಹೀಗಿದೆ:

“ಓರ್ವ ಹುಡುಗಿ ಜೊತೆ 3 ರಿಂದ 4 ಮಂದಿ ಹುಡುಗರು ಕೆಟ್ಟ ಕೃತ್ಯದಲ್ಲಿ ತೊಡಗಿರುವ ವೀಡಿಯೊ ಒಂದು ವಾಟ್ಸಾಪ್ ಮೂಲಕ ಪ್ರಸಾರ ಮಾಡಲಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಪ್ರಸಾರ ಮಾಡುವುದು ಹಾಗೂ ಫೋನ್ ಹಾಗೂ ಕಂಪ್ಯೂಟರ್ ನಲ್ಲಿ ಉಳಿಸಿಕೊಳ್ಳುವುದು ಅಪರಾಧವಾಗಿದೆ. ಒಂದು ವೇಳೆ ವಿಡಿಯೋ ಪ್ರಸಾರ ಮಾಡಿದರೆ ಅವರನ್ನೇ ಆರೋಪಿಯನ್ನಾಗಿ ಮಾಡಿ ಪ್ರಕರಣ ದಾಖಲಿಸಲಾಗುವುದು.