ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ, ಅಮಲು ಪದಾರ್ಥವನ್ನು ಮಟ್ಟಹಾಕಿ- ಜಿಐಓ ಆಗ್ರಹ

0
3962

ಪುತ್ತೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಸಹಪಾಠಿಗಳಿಂದಲೇ ನಡೆದಿರುವ ಅತ್ಯಾಚಾರ ಮತ್ತು ಅದರ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮೆರೆದಿರುವ ವಿಕೃತಿಯು ನಾಗರಿಕ ಸಮಾಜ ತಲೆತಗ್ಗಿಸುವಂತಿದ್ದು, ಅತ್ಯಂತ ಖಂಡನಾರ್ಹವಾಗಿದೆ. ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಕರ್ನಾಟಕದ (ಜಿಐಓ) ಜಿಲ್ಲಾಧ್ಯಕ್ಷೆ ತಬಸ್ಸುಮ್ ಆಗ್ರಹಿಸಿದ್ದಾರೆ.

ಈ ಇಡೀ ಘಟನೆಯಲ್ಲಿ ಅಮಲು ಪದಾರ್ಥಕ್ಕೆ ಬಹು ಮುಖ್ಯ ಪಾತ್ರ ಇದೆ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿಗಳೆಂಬ ನೆಲೆಯಲ್ಲಿ ಪರಸ್ಪರ ಇರುವ ಸಲುಗೆಯೂ ಕೆಲವೊಮ್ಮೆ ವಿದ್ಯಾರ್ಥಿನಿಯರ ಬದುಕನ್ನು ಹಾಳುಮಾಡುವ ಸ್ಥಿತಿಗೆ ಕೊಂಡೊಯ್ಯಬಲ್ಲುದು ಎಂಬುದನ್ನು ಈ ಘಟನೆ ಹೇಳುತ್ತಿದೆ. ಇಂಥ ಸಂದರ್ಭದಲ್ಲಿ ಅಮಲು ಪದಾರ್ಥಗಳು ಅತ್ಯಾಚಾರದಂಥ ಭಯಾನಕ ಕೃತ್ಯಗಳನ್ನು ಸುಲಭಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಅತ್ಯಾಚಾರ ಮತ್ತು ಅಮಲು ಪದಾರ್ಥಗಳ ವಿರುದ್ಧ ವಿಶೇಷ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಮಾದಕ ಪದಾರ್ಥಗಳನ್ನು ಮಟ್ಟ ಹಾಕುವುದಕ್ಕೆ ಪೊಲೀಸ್ ಇಲಾಖೆ ಕಟಿಬದ್ಧವಾಗಬೇಕು ಎಂದು ತಬಸ್ಸುಮ್ ವಿನಂತಿಸಿದ್ದಾರೆ.