ಮಂಗಳೂರಿನ ವಿಮಾನ ನಿಲ್ದಾನ ಅದಾನಿಗೆ: ಕೇಂದ್ರ ಸಚಿವ ಸಂಪುಟ ತೀರ್ಮಾನ

0
803

ಹೊಸದಿಲ್ಲಿ, ಜು.4: ಮಂಗಳೂರು, ಅಹ್ಮದಾಬಾದ್, ಲಕ್ನೊ ವಿಮಾನ ನಿಲ್ದಾಣಗಳು 50 ವರ್ಷಕ್ಕೆ ಅದಾನಿ ಎಂಟರ್‍ಪ್ರೈಸಸ್‍ಗೆ ಹಸ್ತಾಂತರಿಸಲು ಕೇಂದ್ರ ಸಚಿವ ಸಂಪುಟ ತೀರ್ಮಾನಿಸಿದೆ. ಅದಾನಿ ಏಲಂನಲ್ಲಿ ತಿರುವನಂತಪುರಂ, ಗುವಾಹಟಿ, ಜೈಪರ ವಿಮಾನ ನಿಲ್ದಾಣಗಳನ್ನು ಪಡೆದುಕೊಂಡಿದ್ದು ಇವುಗಳ ಹಸ್ತಾಂತರ ಕಾರ್ಯ ಈ ತಿಂಗಳು ನಡೆಯುವುದು ಬಹುತೇಕ ಖಚಿತವಾಗಿದೆ.

ಕೇರಳ ಸರಕಾರ ತಿರುವನಂತಪುರಂ ವಿಮಾನ ನಿಲ್ದಾಣ ಖಾಸಗಿಗಳಿಗೆ ಕೊಡುವುದನ್ನು ವಿರೋಧಿಸುತ್ತಿದೆ. ಆದ್ದರಿಂದ ತಿರುವನಂತಪುರಂ ವಿಮಾನ ನಿಲ್ದಾಣ ಹಸ್ತಾಂತರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಆರು ವಿಮಾನ ನಿಲ್ದಾಣಗಳನ್ನು ಅದಾನಿಗೆ ಗುತ್ತೆ ನೀಡಲು ಸರಕಾರ ತೀರ್ಮಾನಿಸಿತ್ತು. ಈ ವಿಮಾನ ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬ ಪ್ರಯಾಣಿಕನ ಹೆಸರಿನಲ್ಲಿ ಏರ್‍ಪೋರ್ಟ್ ಅಥಾರಿಟಿಗೆ ಹೆಚ್ಚು ಹಣ ನೀಡುವ ವಾಗ್ದಾನವನ್ನು ಅದಾನಿ ಗುಂಪು ಮಾಡಿದೆ.

ಮಂಗಳೂರು ಸಹಿತ ಮೂರು ವಿಮಾನ ನಿಲ್ದಾಣಗಳನ್ನು ಅದಾನಿ ಗುಂಪು ವಹಿಸಿಕೊಳ್ಳುವಾಗ ಅಲ್ಲಿ ಕೆಲಸ ಮಾಡುವವರು ಏರ್‍ಪೋರ್ಟ್ ಅಥಾರಿಟಿಯ ಸಿಬ್ಬಂದಿಗಳಾಗಿ ಮುಂದುವರಿಯಬಹುದು. ಅಥವಾ ಅದಾನಿ ಗ್ರೂಪ್‍ಗೆ ವರ್ಗಾಂತರವಾಗಬಹುದು. ಈ ಸ್ವಾತಂತ್ರ್ಯವನ್ನು ವಿಮಾನ ನಿಲ್ದಾಣದ ಸಿಬ್ಬಂದಿಗಳಿಗೆ ನೀಡಲಾಗಿದೆ.