ಭಾರತೀಯ ಪೌರತ್ವ ಸಾಬೀತುಪಡಿಸುವಲ್ಲಿ ನಿವೃತ್ತ ಸೈನಿಕ ಸನಾವುಲ್ಲ ವಿಫಲ- ಕೇಂದ್ರ ಸರಕಾರ

0
598

ಹೊಸದಿಲ್ಲಿ, ಜು.4: ಪೌರತ್ವದ ವಿಷಯದಲ್ಲಿ ಅಸ್ಸಾಮ್ ನಲ್ಲಿ ಜೈಲಿಗೆ ಹಾಕಲಾದ ಮಾಜಿ ಸೈನಿಕ ಮುಹಮ್ಮದ್ ಸನಾವುಲ್ಲ ತನ್ನ ಭಾರತೀಯ ಪೌರತ್ವವನ್ನು ಟ್ರಿಬ್ಯುನಲ್ ಮುಂದೆ ಸಾಬೀತಪಡಿಸಲು ವಿಫಲರಾಗಿದ್ದಾರೆ ಎಂದು ಕೇಂದ್ರ ಸರಕಾರ ಹೇಳಿದೆ. ರಾಜ್ಯಸಭೆಯಲ್ಲಿ ಈ ಕುರಿತು ಕೇಳಲಾದ ಪ್ರಶ್ನೆಗೆ ಗೃಹ ಸಹಸಚಿವ ಜಿ. ಕಿಶನ್ ರೆಡ್ಡಿ ಉತ್ತರಿಸಿದರು.

1971 ಮಾರ್ಚ್ 25ಕ್ಕಿಂತ ಮುಂಚಿನ ಭಾರತದ ಪರಂಪರೆಗೆ ಕೊಂಡಿಯಾಗಿರುವ ದಾಖಲೆಯ ಪುರಾವೆಗಳನ್ನು ಸಲ್ಲಿಸಲು ಸನಾವುಲ್ಲ ವಿಫಲರಾದರು ಎಂದು ಸಚಿವರು ಹೇಳಿದರು.