ಆರೆಸ್ಸೆಸ್ ವಿರುದ್ಧ ಮಾನಹಾನಿ ಪ್ರಕರಣ: ರಾಹುಲ್ ಗಾಂಧಿಗೆ 15000 ರೂ. ಬಾಂಡ್‍ನಲ್ಲಿ ನಿರೀಕ್ಷಣಾ ಜಾಮೀನು

0
452

ಮುಂಬೈ, ಜು.4: ಆರೆಸ್ಸೆಸ್ ಕಾರ್ಯಕರ್ತರ ಮಾನಹಾನಿ ಪ್ರಕರಣದಲ್ಲಿ ಮುಂಬೈ ಶಿವಡಿ ಕೋರ್ಟು ರಾಹುಲ್ ಗಾಂಧಿಗೆ 15000 ರೂಪಾಯಿ ಮುಚ್ಚಳಿಕೆಯಲ್ಲಿ ನಿರೀಕ್ಷಣಾ ಜಾಮೀನು ನೀಡಿದೆ. ಏಕನಾಥ್ ಗಾಯಕವಾಡ್‍ರು ರಾಹುಲ್ ಗಾಂಧಿಗೆ ಬಾಂಡ್ ಹಣ ತುಂಬಿದರು. ನಂತರ ಕೋರ್ಟಿನಿಂದ ಹೊರಗೆ ಬಂದ ರಾಹುಲ್ ಗಾಂಧಿ ತಾನು ನಿರಪರಾಧಿ ಎಂದು ಮಾಧ್ಯಮಗಳ ಮುಂದೆ ಹೇಳಿದರು. ರಾಹುಲ್ ಗಾಂಧಿ ಪತ್ರಕರ್ತೆ ಗೌರಿ ಲಂಕೇಶ್‍ರ ಕೊಲೆಯನ್ನು ಬಿಜೆಪಿ-ಆರೆಸ್ಸೆಸ್ ವಿಚಾರಧಾರೆಯೊಂದಿಗೆ ಜೋಡಿಸಿ ಹೇಳಿಕೆ ನೀಡಿದ್ದರು.

ವಕೀಲ ಮತ್ತು ಆರೆಸ್ಸೆಸ್ ಕಾರ್ಯಕರ್ತ ಧ್ರುತಿಮಾನ್ ಜೋಶಿಯ ಖಾಸಗಿ ದೂರಿನ ಮೇಲೆ ಮಝ್‍ಗಾಂವ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟು ಫೆಬ್ರುವರಿಯಲ್ಲಿ ರಾಹುಲ್ ಗಾಂಧಿ ಮತ್ತು ಕಮ್ಯೂನಿಸ್ಟ್ ಪಾರ್ಟಿ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಗೆ ಸಮನ್ಸ್ ಜಾರಿ ಮಾಡಿತ್ತು. ಜೋಶಿಯು 2017ರಲ್ಲಿ ರಾಹುಲ್ ಗಾಂಧಿ ಮತ್ತು ಅಂದಿನ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ಕಮ್ಯೂನಿಸ್ಟ್ ಪಕ್ಷದ ಯೆಚೂರಿಯ ವಿರುದ್ಧ ದೂರು ನೀಡಿದ್ದರು. ಗೌರಿ ಲಂಖೇಶ್‍ರನ್ನು ಸೆಪ್ಟಂಬರ್ 2017ಕ್ಕೆ ಬೆಂಗಳೂರಿನಲ್ಲಿ ಅವರ ಮನೆಯ ಹೊರಗೆ ಬಲಪಂಥೀಯ ಸಂಘಟನೆಯ ಸದಸ್ಯರು ಗುಂಡುಹಾರಿಸಿ ಕೊಲೆ ಮಾಡಿದ್ದರು.