✍️ ಕೆ.ಇ.ಎನ್.
ಅಮೆರಿಕದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪ್ರಪಂಚಕ್ಕೆ ಥಾಮಸ್ ಪೈನ್ ಮತ್ತು ಅಬ್ರಹಾಂ ಲಿಂಕನ್ ತುಂಬು ಭರವಸೆ ಆಗಿದ್ದರು. ಪೈನ್ ಮತ್ತು ಲಿಂಕನ್ ಅಮೆರಿಕದ ಸ್ವಾತಂತ್ರ್ಯಕ್ಕೆ ಸೈದ್ಧಾಂತಿಕ ಮಟ್ಟದಲ್ಲಿ ಹೋರಾಡಿದ್ದರು. ಲಿಂಕನ್ ಅವರು ಅಮೆರಿಕದ ಪ್ರಜಾಪ್ರಭುತ್ವದ ಕುರ್ಚಿಗೆ ಕಾರ್ಪೊರೇಟ್ಗಳು ಹತ್ತಿ ಕುಳಿತರೆ ಜನಧ್ವನಿ (ಜನಾಯತ್ತತೆಯು) ಕೊನೆಗೊಳ್ಳುವುದು ಎಂದು ಎಚ್ಚರಿಕೆ ನೀಡಿದ್ದರು. ಅವರಿಬ್ಬರೂ ಅಮೆರಿಕದಿಂದ ಈಗ ಕಣ್ಮರೆಯಾಗಿದ್ದಾರೆ. ಇರಾನ್ ವಿರುದ್ಧ ಎಲ್ಲ ತರದ ದಾಳಿಗಳು ಮತ್ತದರ ಜೊತೆಗೆ ಇರಾನ್ ವಿರೋಧಿ ಪ್ರಚಾರ ಯುದ್ಧವನ್ನೂ ಸಾಮ್ರಾಜ್ಯಶಾಹಿ- ಝಿಯೊನಿಸ್ಟ್ ನೇತೃತ್ವವು ಬಿರುಸಿನಿಂದ ಮಾಡುತ್ತಿದೆ.
ಅಮೆರಿಕ ಮಾನವೀಯ ನೆಲೆಯಲ್ಲಿ ಭಯೋತ್ಪಾದನೆ ವಿರುದ್ಧ ಹಸ್ತಕ್ಷೇಪ ನಡೆಸಿದ್ದು ಮತ್ತು ತಮ್ಮ ನಾಶವನ್ನೇ ಇರಾನಿನ ಜನರು ಬಯಸುತ್ತಿದ್ದಾರೆ ಎಂಬ ರೀತಿಯಲ್ಲಿ ಈ ಅಪಪ್ರಚಾರ ನಡೆಯುತ್ತಿದೆ. ಅಮೆರಿಕದಿಂದ ನಿಜವಾದ ಅಬ್ರಹಾಂ ಲಿಂಕನ್ ಮಾಯವಾದರೂ ಅಮೆರಿಕದ ಬಳಿ ಅವರ ಹೆಸರಿನ ಒಂದು ಯುದ್ಧ ಹಡಗು ಇದೆ. ಅದು ಅಮೆರಿಕ ನಡೆಸುತ್ತಿರುವ ಎಲ್ಲ ಕೆಟ್ಟ ಕೆಲಸಗಳಿಗೂ ಅಸಹಾಯತೆಯಿಂದ ಮೂಕ ಸಾಕ್ಷಿಯಾಗಿದೆ.
ಮೊದಲ ವಿಶ್ವಯುದ್ಧದ ಕಾಲದಲ್ಲಿ ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ರು ಒಂದು ಸಮಿತಿಯನ್ನು ರಚಿಸಿದರು. ಅಂದಿನ ಅಮೆರಿಕದ ಜನರು ಶಾಂತಿ ಪ್ರಿಯ ಜನರಾಗಿದ್ದರು. ಜಾರ್ಜ್ ಕ್ರೀಲ್ರ ನೇತೃತ್ವದಲ್ಲಿ ಅಧ್ಯಕ್ಷ ಟ್ರೂಮನ್ ಒಂದು ಪ್ರಚಾರ ಆಯೋಗ ಇತ್ತು. ಜರ್ಮನಿಯ ವಿರುದ್ಧ ಅಪ ಪ್ರಚಾರ ಮಾಡುವುದು ಇದರ ಕೆಲಸ ಆಗಿತ್ತು. ಅದು ಒಂದು ವರ್ಷದಲ್ಲಿ ಜನರ ನಡುವೆ ನಡೆಸಿದ ಬದಲಾವಣೆ ಆಶ್ಚರ್ಯಕರ. ಅದರ ಪ್ರಚಾರ ಪ್ರಭಾವಕ್ಕೆ ಸಿಕ್ಕ ಅಮೆರಿಕನ್ ಸಾಮಾನ್ಯ ಜನರು ಜರ್ಮನಿಯ ಮಕ್ಕಳೇ ಎದುರು ಸಿಕ್ಕರೆ ಸುಮ್ಮನೆ ಬಿಡಬಾರದೆಂದು ಘರ್ಜಿಸುವಷ್ಟು ಆ ಸಮಾಜ ಬದಲಾವಣೆಯಾಗಿತ್ತು.
ಕ್ರೀಲ್ ಸುಳ್ಳು ಪ್ರಚಾರದ ಮೂಲಕ ಜನರ ಇಮೋಶನ್ ಕಿಲ್ಲಿಂಗ್ ಮಾಡಿದ್ದರು. ಜನರು ಜರ್ಮನಿಯರನ್ನು ದ್ವೇಷಿಸತೊಡಗಿದ್ದರು. ಇದಕ್ಕೆ ಅಂದು ಮಾಡಿದ ಸಿದ್ಧತೆ ಎಂತಹದ್ದು? ನಾಲ್ಕು ನಿಮಿಷದ ದ್ವೇಷ ಪ್ರಚೋದಿತ ಭಾಷಣಕ್ಕೆಂದು ಎಪ್ಪತ್ತು ಸಾವಿರದಷ್ಟಿರುವ ಜನ ಭಾಷಣಕರ್ತರು. ದ್ವೇಷ ಹರಡುವುದಕ್ಕೆ ಪೋಸ್ಟರ್ ಇತ್ಯಾದಿ ಪಿಆರ್ ಕೆಲಸಗಳಿಗೆ ಅಪಾರ ವೆಚ್ಚ ಮಾಡಬಹುದು. ಇಷ್ಟಕ್ಕೆ ಜರ್ಮನಿಯ ಮಕ್ಕಳನ್ನು ಕೂಡ ದ್ವೇಷಿಸುವವರನ್ನು ಸೃಷ್ಟಿಸಲು ಪಿಆರ್ ವರ್ಕ್ಗೆ ಸಾಧ್ಯವಾಗಿತ್ತು.
ಇವತ್ತು ಮೀಡಿಯಾ ಬೆಳೆದಿದೆ, ಖರ್ಚಿಲ್ಲದೆ ಪ್ರಚಾರ ನಡೆಸಬಹುದಾಗಿದೆ. ಒಬ್ಬ ಅಜಾಗರೂಕತೆಯಿರುವ ವ್ಯಕ್ತಿ ಸಿಕ್ಕಿದರೆ ಹಣ ಕೂಡ ಕೊಡದೆ ಅವನನ್ನು ತಮ್ಮ ಪ್ರಚಾರಗಳಿಗೆ ಬಳಸಿಕೊಳ್ಳಬಹುದು. ಕೊಲ್ಲಲ್ಪಟ್ಟವರ ಬಗ್ಗೆ ಮತ್ತು ಗೆದ್ದವರನ್ನು ಈಗ ಜನರಲ್ಲೇ ಒಂದು ವಿಭಾಗ ಅಪರಾಧಿಗಳೆಂದು ನೋಡುತ್ತದೆ. ಇನ್ನೊಂದು ವಿಭಾಗವು ಮತ್ತೊಂದು ವಿಭಾಗದೊಂದಿಗೆ ತಮ್ಮ ಭಿನ್ನಾಭಿಪ್ರಾಯಕ್ಕಾಗಿ ಘರ್ಷಣೆ ನಡೆಸುವುದರಲ್ಲೇ ಸಂಭ್ರಮಿಸುತ್ತದೆ. ಅಯ್ಯೋ ವಿರೋಧಿಸುವುದಕ್ಕಾದರೂ ಬದುಕಿರ ಬೇಕಾಗುತ್ತದೆ ಎಂಬ ಸತ್ಯವನ್ನು ಕೂಡ ಇವರು ಮರೆಯುತ್ತಾರೆ.
ಅಮೆರಿಕದ ಬಾಂಬು ಮನೆಯ ಅಂಗಳಕ್ಕೆ ಅಪ್ಪಳಿಸಬಹುದಾದ ಪರಿಸ್ಥಿತಿ ಇದ್ದರೂ ಮಾತಾಡುವುದಿಲ್ಲ. ಮೌನವಾಗಿರುತ್ತಾರೆ. ನಾಜಿ ಜರ್ಮನಿಯ ಕ್ರೌರ್ಯದ ಕುರಿತು ಅಂದು ಪ್ರಚಲಿತದಲ್ಲಿದ್ದ ನಾಣ್ಣುಡಿ ಇವರ ವರ್ತನೆಯನ್ನು ಒಪ್ಪುತ್ತದೆ. “ಇಫ್ ನೈನ್ ಪೀಪಲ್ ಸಿಟ್ಡೌನ್ ಎ ಟೇಬಲ್ ವಿದ್ ಒನ್ ನಾಜಿ ವಿದೌಟ್ ಪ್ರೊಟೆಸ್ಟ್, ದೆ ಆರ್ ಟೆನ್ ನಾಜಿಸ್ ಎಟ್ ಟೇಬಲ್”- ಇದು ಮೌನವಾಗಿದೆ.
ನೋಡಿ, ಮೊತ್ತ ಮೊದಲು ಅಮೆರಿಕವನ್ನು ಶೈತಾನನಿಗೆ ಹೋಲಿಸಿದ್ದು ಆಯಾತುಲ್ಲಾ ಖಾಮ್ನೆಯಿ ಆಗಿರಲಿಲ್ಲ. ಬದಲಾಗಿ ಮ್ಯಾಕ್ಸಿಂ ಗಾರ್ಕಿ ಮೊತ್ತಮೊದಲು ಅಮೆರಿಕವನ್ನು ಹಳದಿ ಶೈತಾನ ಎಂದು ಕರೆದರು. ಅದಕ್ಕಾಗಿ ತನ್ನ ಕಾದಂಬರಿಯನ್ನು ಬಳಸಿ ಕೊಂಡರು. ಅಮೆರಿಕ ಆಶೆಬುರುಕ. ಅದರ ಆಶೆಗಳಿಗೆ ಲಿಮಿಟಿಲ್ಲ ಎಂದು ಅದು ಇತರ ದೇಶಗಳ ಮೇಲೆ ಮಾಡುವ ಆಕ್ರಮಣವನ್ನು ಅವರು ತನ್ನ ವಾದಕ್ಕೆ ಆಧಾರವಾಗಿ ನೀಡಿದ್ದಾರೆ.
ಗಾರ್ಕಿ ತಮ್ಮ ಕಾದಂಬರಿಯಲ್ಲಿ ಹೀಗೆ ಬರೆದಿದ್ದಾರೆ- ಅಮೆರಿಕ ಮತ್ತು ಅದರ ಮಿತ್ರ ನಾಡುಗಳ ತೈಲ-ಉಕ್ಕು ಉದ್ಯಮಿಗಳು ಮತ್ತು ಗಲ್ಫ್ ದೇಶದ ರಾಜರುಗಳು ಇಷ್ಟೂ ಹಣ ಇರುವ ಇತರ ಶ್ರೀಮಂತರೆಲ್ಲ ಸಾಮಾನ್ಯರಂತಿರುತ್ತಾರೆ ಎಂದು ನಾನೆಂದೂ ಊಹಿಸಿಯೂ ಇರಲಿಲ್ಲ. ಅವರಿಗೆಲ್ಲ ಮೂರು ಮೂರು ಹೊಟ್ಟೆಗಳಿವೆ, ನೂರೈವತ್ತು ಹಲ್ಲುಗಳು ಇರಬಹುದೆಂದು ಭಾವಿಸಿದ್ದೆ. ಒಬ್ಬ ಕೋಟ್ಯಧಿಪತಿಯು ಬೆಳಗ್ಗೆ ಆರು ಗಂಟೆಯಿಂದ ರಾತ್ರಿ ಹನ್ನೆರಡು ಗಂಟೆಯವರೆಗೆ ಸದಾ ಆಹಾರ ತೆಗೆದುಕೊಳ್ಳುತ್ತಿರುತ್ತಾರೆ ಎಂದು ನಾನು ನಂಬಿದ್ದೆ. ತಿನ್ನಲು ಬಾಯಿ ತೆರೆದರೆ, ನೀಗ್ರೋ ಗುಲಾಮನಿಂದ ಪುಡಿ ಮಾಡಿ ಬಾಯಿಗೆ ಹಾಕಿಸುತ್ತಾರೆ. ಬರೆ ನುಂಗುವ ಕೆಲಸವನ್ನು ಮಾತ್ರ ಮಾಡುವುದು ಎಂದು ಕಲ್ಪಿಸಿಕೊಂಡಿದ್ದೆ.
ಅಂದರೆ ನೀಗ್ರೋ ಗುಲಾಮನಿಂದ ತಿನ್ನಿಸಲ್ಪಡುತ್ತಾ ಕೊನೆಯಲ್ಲಿ ಉಸಿರುಗಟ್ಟಿದಂತಾದಾಗ ಆಯಾಸಗೊಂಡು ಆ ಶ್ರೀಮಂತನನ್ನು ಅದೇ ನೀಗ್ರೋ ಎತ್ತಿಕೊಂಡು ಹೋಗುತ್ತಾನೆ. ಹಾಸಿಗೆಯಲ್ಲಿ ಮಲಗಿಸುತ್ತಾನೆ. ಮರು ದಿವಸ ಬೆಳಗ್ಗೆ ಆರು ಗಂಟೆಗೆ ಎದ್ದು ಮತ್ತೆ ತಿನ್ನುವ ದಿನಚರಿಯಲ್ಲಿ ತೊಡಗುತ್ತಾನೆ. ಹೌದು ಈ ಭಯೋತ್ಪಾದಕನ ಗಂಟಲು ಹೀಗಿದೆ ಎಂಬುದನ್ನು ಯೋಚಿಸಲು ಸಾಧ್ಯವಾಗಿರಲಿಲ್ಲ. ಇವರೇ ಈ ಭೂಮಂಡಲ ಇಡಿಯಾಗಿ ತಮ್ಮ ಕೈಗಳೊಳಗೆ ಅದುಮಿಟ್ಟುಕೊಂಡು ತಮ್ಮ ಗುಹೆಯಂತಹ ಬಾಯಿಗೆ ಹತ್ತಿರ ತಂದು ಅದನ್ನು ಸುಟ್ಟ ಬಟಾಟೆಯಂತೆ ತಿನ್ನುವ ಆಶೆ ಪಡುವವರು ಈ ಜನರು ಆಗಿದ್ದಾರೆ. (ಹಳದಿ ಶೈತಾನನ ನಗರ: ಮ್ಯಾಕ್ಸಿಂ ಗಾರ್ಕಿ)
ಇಂದಿನದು ಅತಿಕ್ರಮಿತ ಮಾರುಕಟ್ಟೆ ಯಾದರೂ ವರ್ಣರಂಜಿತವಾಗಿದೆ. ಅದರ ಅಸ್ತಿತ್ವ ಕಣ್ಣೀರು ಮತ್ತು ರಕ್ತದಿಂದ ಆಗಿದೆ. ಮೆಕ್ಡೊನಾಲ್ಡ್ಸ್ ಮತ್ತು ಮೆಕ್ಡೊನೆಲ್ ಡಗ್ಲಾಸ್ (ಆಯುಧ ಕಂಪೆನಿ) ಒಂದೇ. ಯಾವತ್ತೂ ಸಾಮ್ರಾಜ್ಯಶಾಹಿಗಳ ಮಾರುಕಟ್ಟೆಗೆ ಸೈನಿಕ ಶಕ್ತಿ ಮತ್ತು ಮನಃಶಾಸ್ತ್ರ ಯುದ್ಧದ ಬೆಂಬಲ ಇಲ್ಲದೆ ಅಸ್ತಿತ್ವ ಇಲ್ಲ. ಇರಾನ್ ವಿರುದ್ಧ ವಿಚಾರ ನೋಡಿ. ಅದು ಸಾಮ್ರಾಜ್ಯ ಶಾಹಿ, ಝಿಯೊನಿಸ್ಟ್ ಹಾಗೂ ಫ್ಯಾಶಿಸ್ಟ್ ಶಕ್ತಿಗಳು ಯುದ್ಧವನ್ನು ಮಾಡುತ್ತಿದ್ದಾರೆ ಎಂದಾದರೆ ತಪ್ಪಾಗಬಹುದು. ಅತಿಕ್ರಮಣವೂ ಅಲ್ಲ. ಸೈನಿಕ, ರಾಜಕೀಯ ಸಾಂಸ್ಕೃತಿಕ ದಾಳಿ ಆಗಿದೆ. ಭೂಮಿಯನ್ನು ಮೌಲ್ಯಗಳ ದಫನ ಭೂಮಿಯನ್ನಾಗಿ ಮಾಡಿವೆ. ಅಮೂಲ್ಯವಾದ ಬದುಕನ್ನು ತಮಾಷೆಯ (ಮನರಂಜನೆಯ ವಸ್ತುಗಳಂತೆ) ಆಲಯವನ್ನಾಗಿ ಮಾಡುವ ಸಾಂಸ್ಕೃತಿಕ ಉದಾರೀಕರಣದ ಅಜೆಂಡಾವನ್ನು ಕೂಡ ಇದರಲ್ಲಿ ಕಾಣಬಹುದು.
ಇರಾನಿನ ವಿರುದ್ಧ ನಡೆಯುವಾಗ ಇದು ಬರೇ ಇರಾನಿಗೆ ಮಾತ್ರ ಸಂಬಂಧಿಸಿದ್ದಲ್ಲ ಎಂಬ ಅರಿವನ್ನೇ ಮಾಧ್ಯಮಗಳು ಕೊಲ್ಲುತ್ತಿವೆ. ಹಲವು ಸಂದರ್ಭಗಳಲ್ಲಿ ಇವುಗಳಲ್ಲಿ ಉಲ್ಟಾಪಲ್ಟಿಯಾದ ಜಗತ್ತಿನ ಶಿಥಿಲ ಚಿತ್ರಗಳು ಪ್ರಕಟಗೊಳ್ಳುತ್ತವೆ ಎಂದು ಮ್ಯಾಕ್ಸಿಂ ಗಾರ್ಕಿ, ಥಾಮಸ್ ಎಲ್. ಫ್ರೀಡ್ಮನ್ ಬರೆಯುತ್ತಾರೆ. ಸಾಮ್ರಾಜ್ಯವಾದಿಗಳು ನೀಡುವ ಕೊಲೆ ಕರೆಗೆ ಮೌನಿ ವಿಶ್ವಸಂಸ್ಥೆ ಮತ್ತು ಅವುಗಳಂತಹ ಅಂತಾರಾಷ್ಟ್ರೀಯ ಸಂಘಟನೆಗಳಿಗೆ ಆಕ್ರಮಣಕಾರಿ ಜಾಗತೀಕರಣದ ಯೋಧರಾಗಲು ಆಗುವುದೇ ಇಲ್ಲ. ಅವು ಬರೆ ಅಸಹಾಯಕಗೊಂಡ ಬಲಿಪಶುಗಳು. ಆದ್ದರಿಂದ ಜಗತ್ತು ಅವರಿಂದ ಇನ್ನು ಹೆಚ್ಚಿನದ್ದನ್ನು ನಿರೀಕ್ಷಿಸುವಂತೆ ಇಲ್ಲ. ಇಷ್ಟೆಲ್ಲ ಅನ್ಯಾಯವು ಕಣ್ಣಮುಂದೆ ನಡೆದರೂ ಏನೂ ಅರಿವೇ ಇಲ್ಲದ ಹಾಗೆ ಇರುವ ವಿಶ್ವಸಂಸ್ಥೆ, ಒಗ್ಗಟ್ಟನ್ನೇ ಬಿಕ್ಕಟ್ಟಿಗೆ ದೂಡಿ ಹಾಕಿದ ಒಂದು ಅತಿಕ್ರಮಣ ಸಂಸ್ಥೆಯಾಗಿ ಬದಲಾಗಿದೆ. ಇಸ್ರೇಲ್ ಅಮೆರಿಕ ನಿರಂತರ ಮಾಡುತ್ತಿರುವ ಪಾತಕಗಳಿಗೆ ಎಚ್ಚರಿಕೆ ಕೊಡುವುದಕ್ಕೆ ಶಕ್ತಿಯಿಲ್ಲದ ಅಪ್ರಭಾವಿ ಸಂಸ್ಥೆ ವಿಶ್ವಸಂಸ್ಥೆ. ಅದು ಮುಂದಕ್ಕೂ ಜಗತ್ತಿನ ಅಂತಃಸಾಕ್ಷಿಯಲ್ಲಿ ನಾಚಿಕೆಗೇಡಿನಂತೆ ಕ್ಷೀಣಗೊಂಡೇ ಅಸ್ತಿತ್ವ ಉಳಿಸಬೇಕಾಗಿದೆ.
1983ರಲ್ಲಿ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಗ್ರೆನಡದ ವಿರುದ್ಧ ದಾಳಿ ಮಾಡಿಸಿದ್ದರು. ಪುಟ್ಟ ದೇಶ ಗ್ರೆನಡ ವೆಸ್ಟ್ ಇಂಡೀಸ್ನಲ್ಲಿದೆ. ಗ್ರೆನಡ ಅಮೆರಿಕದ ಅತಿಕ್ರಮಣದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಸಣ್ಣ ಪ್ರತಿರೋಧವನ್ನು ಮುಂದಿಟ್ಟಿತು. ವಿಶ್ವಸಂಸ್ಥೆ ಪಾಸು ಮಾಡಿದ ಪ್ರಸ್ತಾವಕ್ಕೆ ಅಮೆರಿಕ ಬೆಲೆ ಕೊಡಲೇ ಇಲ್ಲ. ವಿಶ್ವಸಂಸ್ಥೆ ಆಗ ಇಷ್ಟು ದುರ್ಬಲವಾಗಿರಲಿಲ್ಲ. ಪ್ರಸ್ತಾವದ ಕುರಿತು ರೇಗನ್ ಹೇಳಿದ್ದು, ವಿಶ್ವಸಂಸ್ಥೆಯಲ್ಲಿ ನಮ್ಮ ಎಲ್ಲ ವಿಷಯಗಳಲ್ಲಿ ನೂರಾರು ದೇಶಗಳು ಭಿನ್ನಮತ ವ್ಯಕ್ತಪಡಿಸುತ್ತವೆ. ಅದರಿಂದ ನನ್ನ ಬೆಳಗ್ಗಿನ ಡಿನ್ನರಿಗೆ ಯಾವುದೇ ತೊಂದರೆ ಆಗಿಲ್ಲ. ಆಗಲೇ ಅಮೆರಿಕಕ್ಕೆ ಇಷ್ಟು ದರ್ಪ ಇತ್ತು. 1945 ಆಗಸ್ಟ್ 6 ಮತ್ತು 9ನೇ ತಾರೀಕುಗಳಲ್ಲಿ ಜಪಾನಿನ ಹಿರೋಶಿಮಾ, ನಾಗಾಸಾಕಿಗೆ ಪರಮಾಣು ಬಾಂಬು ಹಾಕಿದ್ದಕ್ಕೆ ಅಪರಾಧಿ ಪ್ರಜ್ಞೆ ಕಾಡುತ್ತದಾ? ಎಂದು ಕೇಳಿದ್ದಕ್ಕೆ ಎಂದಿಗಿಂತ ಹೆಚ್ಚು ಸುಖವಾಗಿ ನಿದ್ದಿಸಿದ್ದೇನೆ ಎಂದು ಅಂದಿನ ಅಮೆರಿಕ ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ ಹೇಳಿದ್ದರು.
ಆದರೆ, ಬಾಂಬು ದಾಳಿಗೆ ಹವಾಮಾನ ಸರಿಯಾಗಿದೆಯೇ ಎಂದು ಪರಿಶೀಲಿಸಲು ನಿಯೋಜಿಸಿದ ಕ್ಲೌಡ್ ಈದರ್ಲಿ ಎಂಬ ಪೈಲಟ್, ಹಿರೋಶಿಮಾದಲ್ಲಿ ನಡೆದ ಸಾಮೂಹಿಕ ಕೊಲೆಗಳನ್ನು ಕಂಡು ಮನಸ್ಸಿನ ತಾಳ ತಪ್ಪಿ ಆತ್ಮಹತ್ಯೆಗೆ ಶ್ರಮಿಸಿದ್ದರು. ಸ್ವಯಂ ಹಿಂಸಿಸಿ ಜೈಲುಪಾಲಾಗಲು ಪ್ರಯತ್ನಿಸಿದ್ದರು. ಹಿರೋಶಿಮಾದ ಪಶ್ಚಾತ್ತಾಪಪಡುವ ಪೈಲಟ್ ಎಂದು ನಂತರ ಅವರು ಪ್ರಸಿದ್ಧರಾದರು. ಅವರನ್ನು ಟ್ರೂಮನ್ ಆಡಳಿತ ಬಿಂಬಿಸಿದ್ದು ಹೇಗೆ? ಹುಚ್ಚ.
ಬರ್ಟ್ರಾಂಡ್ ರಸೆಲ್ ಹೇಳಿದ್ದು – ನೀನು ಹುಚ್ಚನಲ್ಲ, ನಿನ್ನ ಮನಸ್ಥಿತಿ ಸರಿಯಿದೆ. ನಿನಗೆ ಹುಚ್ಚು ಎನ್ನುವವರೇ ಹುಚ್ಚರು. ಆದರೂ ಹಿರೋಶಿಮಾದ ನೋವಿನ ಅಭಿವ್ಯಕ್ತಿಯನ್ನು ಟ್ರೂಮನ್ ಸರಕಾರಕ್ಕೆ ಹುಚ್ಚನ ಒದರಾಟ ಎಂದು ಬಿಂಬಿಸಲು ಸಾಧ್ಯವಾಗಿತ್ತು.












