ಸನ್ಮಾರ್ಗ ವಾರ್ತೆ
ಇರಾನಿನಲ್ಲಿ ಯುದ್ಧದ ಕಾವು ಇನ್ನಷ್ಟು ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರು ಜಗತ್ತಿನ ವಿವಿಧ ರಾಷ್ಟ್ರಗಳ ನಾಯಕರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.
ಸ್ಪೈನ್ ದೊರೆ ಆರನೇ ಫಿಲಿಪ್ ಜೊತೆಗೆ ಮುಹಮ್ಮದ್ ಬಿನ್ ಸಲ್ಮಾನ್ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಜೊತೆಗೆ ಉಜ್ ಬೆಕಿಸ್ತಾನ್ ಅಧ್ಯಕ್ಷ ಶೌಕತ್ ಮಿರ್ ಜಯೇವ್, ಮೌರಿ ತಾನಿಯಾದ ಅಧ್ಯಕ್ಷ ಮುಹಮ್ಮದ್ ಶೇಕ್ ಅಲ್ ಗಜ್ವಾನಿ ಮುಂತಾದವರ ಜೊತೆ ಮುಹಮ್ಮದ್ ಬಿನ್ ಸಲ್ಮಾನ್ ಸಂಭಾಷಣೆ ನಡೆಸಿ ಯುದ್ಧದ ಕುರಿತಂತೆ ಚರ್ಚೆ ನಡೆಸಿದ್ದಾರೆ.
ಇದೇ ವೇಳೆ ಸೌದಿಯ ವಿರುದ್ಧ ಇರಾನ್ ನಡೆಸುತ್ತಿರುವ ದಾಳಿಯನ್ನು ಈ ನಾಯಕರು ಬಲವಾಗಿ ವಿರೋಧಿಸಿದ್ದಾರೆ. ಸೌದಿಯ ಪರಮಾಧಿಕಾರ ಮತ್ತು ಸುರಕ್ಷಿತತೆಯ ಹಿನ್ನೆಲೆಯಲ್ಲಿ ಸೌದಿ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಕ್ಕೂ ತಮ್ಮ ಪೂರ್ಣ ಬೆಂಬಲ ಇದೆ ಎಂದು ಈ ನಾಯಕರು ಒತ್ತಿ ಹೇಳಿದ್ದಾರೆ.
ಇದೇ ವೇಳೆ ಪ್ರದೇಶದ ಶಾಂತಿಯ ವಾತಾವರಣವನ್ನು ಕದಡಬಲ್ಲ ಸೇನಾ ಕಾರ್ಯಾಚರಣೆಗೆ ಈ ಎಲ್ಲ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರ ಅಲ್ಲ ಯುದ್ಧ ತಕ್ಷಣ ಸ್ಥಗಿತಗೊಳ್ಳುವುದಕ್ಕೆ ಬೇಕಾದ ಪ್ರಯತ್ನಗಳು ನಡೆಯಲಿ ಎಂದು ಹೇಳಿದ್ದಾರೆ.












