ಜೆರುಸಲೇಂ, ಜು. 9: ಬೈಬಲ್ನಲ್ಲಿ ಪ್ರಸ್ತಾಪಗೊಂಡ ಮೂರುಸಾವಿರ ವರ್ಷ ಹಳೆಯ ಪ್ರಾಚೀನ ನಗರದ ಅವಶೇಷಗಳನ್ನು ಇಸ್ರೇಲ್ ಪತ್ತೆಹಚ್ಚಿದೆ. ಇಸ್ರೇಲ್ ದೊರೆ ಸಾವೂಲ್ನಿಂದ ದಾವೀದ್ ದೊರೆ ಆಶ್ರಯ ಕೋರಿ ಬಂದಿದ್ದ ಫಿಲಿಸ್ತೀನ್ ನಗರ ಇದ್ದ ಸ್ಥಳ ಪತ್ತೆಯಾಗಿದೆ. ದಾವಿದ್ ರು ಹೆಬ್ರಾನ್ನ ದೊರೆಯಾಗುವ ಮೊದಲು ಫಿಲಿಸ್ತೀನ್ ರಾಜನ ಅಧೀನದಲ್ಲಿದ್ದ ಸಿಕ್ಲಗ್ ನಗರ ಇದು ಎಂದು ಸಂಶೋಧಕರು ಹೇಳಿದರು.
ಫಿಲಿಸ್ತೀನ್ ನಗರವಾಗಿರಬಹುದಾದ ಸಾಧ್ಯತೆಯಿರುವ 12 ಸ್ಥಳಗಳ ಕುರಿತು ಇಸ್ರೇಲ್ ಇತಿಹಾಸ ಸಂಶೋಧಕರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಈ ನಗರಗಳನ್ನು ವೈಜ್ಞಾನಿಕವಾಗಿ ಜೋಡಿಸುವ ಪುರಾವೆ ಇಲ್ಲದ್ದು ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು ಎಂದು ಪ್ರಾಚ್ಯವಸ್ತು ಇಲಾಖೆ ತಿಳಿಸಿದರು. ಹೀಬ್ರೂ ಯುನಿವರ್ಸಿಟಿ, ಆಸ್ಟ್ರೇಲಿಯದ ಮಕ್ವಯರಿ ಯುನಿವರ್ಸಿಟಿ ಸೇರಿ ನಡೆಸಿದ ಹೊಸ ಸಂಶೋಧನೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಫಿಲಿಸ್ತೀನ್ ನಗರವನ್ನು ಪತ್ತೆಯಾಗಿದೆ ಎಂದು ಇಸ್ರೇಲ್ ಪ್ರಾಚ್ಯವಸ್ತು ಇಲಾಖೆ ತಿಳಿಸಿತು. ಫಿಲಿಸ್ತೀನ್ ನಾಗರಿಕತೆಗೆ ಸಂಬ೦ಧಿಸಿದ ವಸ್ತುಗಳು ಇಲ್ಲಿ ಖನದದಲ್ಲಿ ಕಂಡು ಬಂದಿವೆ ಎಂದು ಪ್ರಾಚ್ಯವಸ್ತು ಇಲಾಖೆ ಹೇಳಿದೆ.












