200 ರೂ. ಸಾಲ ಪಾವತಿಸಲು ಔರಂಗ್‍ಬಾದ್‍ಗೆ ಬಂದ ಕೆನ್ಯಾದ ಸಂಸದ; ಕಾಶಿನಾಥ್ ದಂಗು

0
773

ಮುಂಬೈ, ಜು.11: ಸಾಲ ಪಡೆದವರಿಗೆ ಬೆನ್ನು ಹಾಕಿ ಓಡಿಹೋಗುವ ಈ ಕಾಲದಲ್ಲಿ ಮೂವತ್ತು ವರ್ಷದ ಹಿಂದೆ 200 ರೂಪಾಯಿ ಸಾಲ ಮಾಡಿ ಹೋಗಿದ್ದ ಕೆನ್ಯಾದ ಸಂಸದರೊಬ್ಬರು ಅದನ್ನು ಕೊಡಲು ಔರಂಗಾಬಾದಿಗೆ ಬಂದಿದ್ದಾರೆ. ಔರಂಗಾಬದ್‍ನ ಕಾಶಿನಾಥ್ ಗಾವ್ಲಿಗೆ ಅದನ್ನು ನಂಬಲು ಕೂಡ ಸಾಧ್ಯವಾಗಿಲ್ಲ. ಸಾಲ ತೀರಿಸಲು ಬಂದ ವ್ಯಕ್ತಿ ಸಾಮಾನ್ಯರಲ್ಲ ಕೆನ್ಯಾದ ಪಾರ್ಲಿಮೆಂಟ್ ಸದಸ್ಯರಾದ ರಿಚರ್ಡತೊಂಗಿ.

ಸಾಲವನ್ನು ಕೊಡಲು ಸೋಮವಾರ ರಿಚರ್ಡ್ ಪತ್ನಿಯೊಂದಿಗೆ ಕಾಶೀನಾಥ್‍ರ ಮನೆಗೆ ಬಂದಿದ್ದಾರೆ. 1985ರಲ್ಲಿ ಔರಂಗಾಬಾದಿನ ಒಂದು ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ವಾಂಖೆಡೆ ನಗರದಲ್ಲಿ ರಿಚಡ್ ವಾಸಿಸುತ್ತಿದ್ದರು. ಔರಂಗಾಬಾದಿನ ವಾಂಖಡೆ ನಗರದಲ್ಲಿ ಕಾಶಿನಾಥ್ ದಿನಸಿ ಅಂಗಡಿ ಹೊಂದಿದ್ದರು.

ಅಂದು ಬಡತನದ ಕಾಲದಲ್ಲಿ ಕಾಶೀನಾಥ್ ನನಗೆ ಸಹಕರಿಸಿದ್ದಾರೆ. ಒಮ್ಮೆ ಇಲ್ಲಿಗೆ ಬಂದು ಸಾಲ ತೀರಿಸಿ ಕೃತಜ್ಞತೆ ಸೂಚಿಸಬೇಕೆಂದು ಬಹಳ ಕಾಲದಿಂದ ಯೋಚಿಸಿದ್ದೆ. ಈ ಸಮಯ ಈಗ ಬಂದಿದೆ ಎಂದು ರಿಚಾರ್ಡ್ ಹೇಳಿದರು. ಇಂದು ಕಾಶೀನಾಥ್‍ರಿಗೆ ಎಪ್ಪತ್ತು ವರ್ಷ ವಯಸ್ಸು. ಮಧ್ಯಾಹ್ನದ ಊಟಕ್ಕೆ ರಿಚರ್ಡ್ ಕುಟುಂಬದೊಂದಿಗೆ ಹೊಟೇಲಿಗೆ ಹೋಗಲು ಯತ್ನಿಸಿದರೂ ಕಾಶೀನಾಥ್‍ರ ಒತ್ತಾಯಕ್ಕೆ ಮನೆಯಲ್ಲಿ ಊಟ ಮಾಡಿದರು. ಕಾಶೀನಾಥ್‍ರಿಗೆ ತನ್ನೂರಿಗೆ ಬರುವಂತೆ ಆಹ್ವಾನ ನೀಡಿ ರಿಚರ್ಡ್ ಮರಳಿ ಹೋಗಿದ್ದಾರೆ.