ಸ್ಪೀಕರ್ ವಿರುದ್ಧ ಐವರು ಶಾಸಕರು ಸುಪ್ರೀಂಕೋರ್ಟಿಗೆ

0
513

ಹೊಸದಿಲ್ಲಿ, ಜು. 13: ಕರ್ನಾಟಕದಲ್ಲಿ ಐವರು ಅತೃಪ್ತ ಶಾಸಕರು ಸ್ಪೀಕರ್ ವಿರುದ್ಧ ಸುಪ್ರೀಂಕೋರ್ಟಿನ ಮೊರೆ ಹೋಗಿದ್ದಾರೆ. ತಮ್ಮ ರಾಜೀನಾಮೆಯನ್ನು ಸ್ಪೀಕರ್ ಸ್ವೀಕರಿಸುವುದಿಲ್ಲ ಎಂದು ಅವರು ದೂರು ನೀಡಿದ್ದಾರೆ. ಸರಕಾರವನ್ನು ಬೆಂಬಲಿಸದಿದ್ದರೆ ಅನರ್ಹಗೊಳಿಸುವ ಬೆದರಿಕೆ ಹಾಕಲಾಗಿದೆ ಎಂದು ಶಾಸಕರು ಆರೋಪಿಸಿದ್ದಾರೆ.

ಇದೇ ವೇಳೆ ಯಡಿಯೂರಪ್ಪ ವಿಶ್ವಾಸ ಮತ ಕೇಳುವುದನ್ನು ವಿರೋಧಿಸುವುದಿಲ್ಲ. ಸೋಮವಾರದವರೆಗೆ ಕಾಯಲಾಗುತ್ತದೆ ಎಂದು ಹೇಳಿದರು. ಆದರೆ ಕಾಂಗ್ರೆಸ್ ಜೆಡಿಎಸ್‍ನ ಅತೃಪ್ತ ಶಾಸಕರ ವಿರುದ್ಧ ಮಂಗಳವಾರದವರೆಗೆ ಕ್ರಮ ಕೈಗೊಳ್ಳಬಾರದೆಂದು ಸ್ಪೀಕರ್ ರಮೇಶ್ ಕುಮಾರ್ ಗೆ ಸುಪ್ರೀಂಕೋರ್ಟು ಸೂಚಿಸಿದೆ. ಡಿ.ಕೆ.ಶಿವಕುಮಾರ್ ತನ್ನನ್ನು ಭೇಟಿಯಾಗಿದ್ದು ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಆದರೆ ಉಳಿದವರಲ್ಲಿ ಚರ್ಚೆ ನಡೆಸಿ ತಿಳಿಸುತ್ತೇನೆಂದು ಅವರಿಗೆ ಹೇಳಿದೆ ಎಂದು ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಹೇಳಿದರು.