ಗುಹಾವಟಿ, ಜು. 15: ಅಸ್ಸಾಂನಲ್ಲಿ ಬಂಗಾಳ ಭಾಷೆ ಮಾತಾಡುವ ಮುಸ್ಲಿಮರ ತಾರತಮ್ಯದ ವಿರುದ್ಧ ಕವಿತೆಯ ಪ್ರಕರಣದಲ್ಲಿ ಸಿಲುಕಿರುವ ಹಾಫಿಝ್ ಅಹ್ಮದ್ ಕ್ಷಮೆಯಾಚಿಸಿ ಹೇಳಿಕೆ ನೀಡಿದ್ದಾರೆ. ಪೌರತ್ವ ನಿಷೇಧಕ್ಕೆ ಸಂಬಂಧಿಸಿದ ಕವಿತೆ ಇದಲ್ಲ. 2016ರಲ್ಲಿ ಬರೆದದ್ದು ಇದು. ಅಸ್ಸಾಮೀ ಸಾಹಿತ್ಯಕ್ಕೆ ಕೊಡುಗೆ ನೀಡಿರುವ ನನಗೆ ಅಂತಹದ್ದೆಲ್ಲ ಯೋಚಿಸಲು ಸಾಧ್ಯವಿಲ್ಲ ಎಂದು ಹಾಫಿಝ್ ಹೇಳಿದರು. ಬಂಗಾಳದ ಪ್ರಾದೇಶಿಕ ಮಿಯ ಭಾಷೆಯಲ್ಲಿ ಬರೆದಿದ್ದ ಕವಿತೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ್ದರು.
ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕ ಪಟ್ಟಿಯಲ್ಲಿ ಅಂತಿಮ ಪಟ್ಟಿ ಜುಲೈ 31ಕ್ಕೆ ಹೊರಬರಲಿದ್ದು ಈ ವೇಳೆ ವಿವಾದ ಭುಗಿಲೆದ್ದಿದೆ. ಹಿರಿಯ ಪತ್ರಕರ್ತರೋರ್ವರು ಹತ್ತು ಕವಿಗಳ ಮೇಲೆ ಪೊಲೀಸ್ ಕೇಸು ದಾಖಲಿಸಿದ್ದಾರೆ. ಕಾಝಿ ಶರೋವರ್ ಹುಸೈನ್, ರೆಹಾನ ಸುಲ್ತಾನ, ಅಬ್ದುರ್ರಹೀಂ, ಅಶ್ರಫುಲ್ ಹುಸೈನ್, ಅಬ್ದುಲ್ ಕಲಾಂ ಆಝಾದ್, ಸಲೀಂ ಎಂ. ಹುಸೈನ್, ಕರಿಷ್ಮಾ ಹಝಾರಿಕ, ಬನಮಲ್ಲಿಕ ಚೌಧರಿ, ಫೋರ್ಹಾದ್ ಭುಯಾನ್ ವಿರುದ್ಧ ಕೇಸು ದಾಖಲಾಗಿದೆ. ಕವಿತೆಗಳಿಗೊ, ಮುಸ್ಲಿಮರಿಗೋ ನಾನು ವಿರೋಧಿಯಲ್ಲ. ಆದರೆ ಕವಿತೆಯ ಆಶಯವನ್ನು ಪ್ರಶ್ನಿಸುತ್ತಿದ್ದೇನೆ ಎಂದು ದೂರುದಾರ ಹೇಳಿದ್ದಾರೆ. ಕವಿಗಳ ವಿರುದ್ಧ ಕೇಸು ಹಾಕಿದ್ದನ್ನು ಸಾಹಿತ್ಯಕಾರರು, ಸಾಮಾಜಿಕ ಕಾರ್ಯಕರ್ತರು ಖಂಡಿಸಿದ್ದಾರೆ.












