ಕಾಂಗ್ರೆಸ್‍ನಿಂದ ಬೆದರಿಕೆ: ಅತೃಪ್ತ ಶಾಸಕರಿಂದ ಪೊಲೀಸ್ ರಕ್ಷಣೆ ಕೋರಿಕೆ

0
393

ಮುಂಬೈ, ಜು. 15: ಕರ್ನಾಟಕದ ದೋಸ್ತಿ ಸರಕಾರದಿಂದ ಬೆದರಿಕೆ ಇದೆ ಎನ್ನುವ ದೂರನ್ನು ಅತೃಪ್ತ ಕಾಂಗ್ರೆಸ್ ಶಾಸಕರು ಮುಂಬೈ ಪೊಲೀಸರಿಗೆ ನೀಡಿದ್ದು ರಕ್ಷಣೆ ಕೋರಿದ್ದಾರೆ. ಕಾಂಗ್ರೆಸ್ಸನ್ನು ಬೆಂಬಲಿಸುತ್ತೇನೆ ಎಂದ ಅತೃಪ್ತ ಶಾಸಕ ಎಂ ಟಿ ಬಿ ನಾಗರಾಜ್ ಸಹಿತ ಹದಿನಾಲ್ಕು ಶಾಕಸರು ದೂರಿಗೆ ಸಹಿ ಹಾಕಿದ್ದಾರೆ.

ರಾಜೀನಾಮೆ ಹಿಂದಕ್ಕೆ ಪಡೆದು ಕಾಂಗ್ರೆಸ್ ಜೊತೆ ಇರುತ್ತೇನೆ ಎಂದು ಎಂ ಟಿ ಬಿ ನಾಗರಾಜ್ ಹೇಳಿದ್ದರು. ಆದರೆ ಹೀಗೆ

ಬೆಂಗಳೂರಿನಲ್ಲಿ ಹೇಳಿದ ಬೆನ್ನಿಗೆ ಮುಂಬೈ ಅತೃಪ್ತರನ್ನು ಸೇರಿಕೊಂಡ ಅವರು ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇಇಲ್ಲ ಎಂದು ಹೇಳಿದ್ದಾರೆ. ಕರ್ನಾಟಕದ ಕಾಂಗ್ರೆಸ್ಸಿಗರೊಂದಿಗಾಗಲಿ, ಇತರ ಪಾರ್ಟಿಯವರೊಂದಿಗಾಗಲಿ ಚರ್ಚೆ ಮಾಡಲು ಬಯಸುವುದಿಲ್ಲವೆಂದು ದೂರಿನಲ್ಲಿ ಅತೃಪ್ತರು ಹೇಳಿದ್ದಾರೆ. ಅತೃಪ್ತರ ಮನವೊಲಿಸಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಮುಂಬೈ ರೆನಾಸಾನ್ಸ್ ಹೊಟೇಲಿಗೆ ಬರುತ್ತಾರೆ ಎನ್ನುವ ಸೂಚನೆ ಇದೆ. ಇದೇ ವೇಳೆ ಅತೃಪ್ತರು ರಕ್ಷಣೆ ಕೋರಿ ಮುಂಬೈ ಪೊಲೀಸರ ಮೊರೆ ಹೋಗಿದ್ದಾರೆ.