ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಹಾಗೂ A-One ಯೂತ್ ವೆಲ್ಫೇರ್ ಸೋಸೈಟಿ ವತಿಯಿಂದ SIR ಜಾಗೃತಿ ಕಾರ್ಯಕ್ರಮ

0
244

ಸನ್ಮಾರ್ಗ ವಾರ್ತೆ

ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಹಾಗೂ A-One ಯೂತ್ ವೆಲ್ಫೇರ್ ಸೋಸೈಟಿ, ಮಧುಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಮ್ಯಾಪಿಂಗ್ ಪ್ರಕ್ರಿಯೆ, ಎನುಮ್ರೇಶನ್ ಫಾರ್ಮ್ ಭರ್ತಿ, ನೋಟಿಸ್ ಹಂತ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ವಿವಿಧ ಅಂಶಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯಿಲ್, ತೀರ್ಥಹಳ್ಳಿ ಹಾಗೂ ಕಮ್ಯುನಿಟಿ ಎಂಪವರ್‌ಮೆಂಟ್ ಅಧಿಕಾರಿ ಸುಹೈಲ್ ಮಸುಲ್ದಾರ್ ಭಾಗವಹಿಸಿ, SIR ಪ್ರಕ್ರಿಯೆಯ ಮಹತ್ವ, ಕಾರ್ಯವಿಧಾನ ಮತ್ತು ಸಾರ್ವಜನಿಕರ ಪಾತ್ರದ ಕುರಿತು ವಿವರವಾದ ಮಾಹಿತಿ ನೀಡಿದರು.