ಸನ್ಮಾರ್ಗ ವಾರ್ತೆ
ಪಕ್ಕಲಡ್ಕ: ಜಮಾಅತೇ ಇಸ್ಲಾಮಿ ಹಿಂದ್ ಪಕ್ಕಲಡ್ಕ ವರ್ತುಲದ ವತಿಯಿಂದ “ದೀನ್ ಸಾಬ್ ಮತ್ತು ಆಂದೊಲನ” ವಿಷಯದ ಮೇಲೆ ಪ್ರೇರಣಾ ಕಾರ್ಯಕ್ರಮವು ಇಬ್ರಾಹಿಂ ಸಈದ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಬ್ರದರ್ ಶಾಹಿದ್ ಅವರು ಕಿರಾ ಅತ್ ಪಠಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅನುಪಮಾ ಮಹಿಳಾ ಮಾಸಿಕ ಸಂಪಾದಕಿ ಸಬೀಹಾ ಫಾತಿಮಾ ರವರು ದೀನ್ ಸಾಬ್ ರವರ ವೈಯಕ್ತಿಕ ವಿಚಾರಗಳು, ಗುಣ ನಡತೆ, ಸರಳತೆ ಇತ್ಯಾದಿ ಪ್ರೇರಣಾತ್ಮಕ ವಿಚಾರ ಘಟನೆ ಹಾಗೂ ಅವರ ಜೊತೆ ತಮ್ಮ ಒಡನಾಟವನ್ನು ಹಂಚಿಕೊಂಡರು. ನಂತರ ಮಾತನಾಡಿದ ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಇದರ ಸದಸ್ಯರಾದ ನೂರುಲ್ ಅಮೀನ್ ರವರು ದೀನ್ ಸಾಬ್ ರವರು ಆಂದೋಲನಕ್ಕೆ ನಿಡಿದ ಕೊಡುಗೆ ಪ್ರಾರಂಭದಲ್ಲಿ ಅವರ ತ್ಯಾಗ ಆಧ್ಯಾತ್ಮಿಕ ವಿಚಾರಗಳು ಸೇರಿ ದೀನ್ ಮತ್ತು ಪಕ್ಕಲಡ್ಕ ಆಂದೋಲನದ ಹಿಂದಿನ ನೆನಪುಗಳನ್ನು ಹಂಚಿಕೊಂಡರು.
ಅನಿಸಿಕೆ ಭಾಷಣವನ್ನು ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷರಾದ ಅಬ್ದುಲ್ ಗಫೂರ್ ಕುಲಾಯಿ ಅವರು ನೀಡಿ, ಕಾರ್ಯಕ್ರಮದ ಉಪಯುಕ್ತತೆಯನ್ನು ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣವನ್ನು ಪಕ್ಕಲಡ್ಕ ಸಂಚಾಲಕರಾದ ಸುಲೈಮಾನ್ ಪಕ್ಕಲಡ್ಕ ಅವರು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಲಯದ ಕಾರ್ಯದರ್ಶಿಗಳಾದ ಮುಹಮ್ಮದ್ ಸಮೀರ್ ದೀನ್ ಹಾಗೂ ಪಕ್ಕಲಡ್ಕ ಸಂಚಾಲಕಿ ಝೀನತ್ ರವರು ಉಪಸ್ಥಿತಿತರಿದ್ದರು. ಶಿಕ್ಷಕ ಅಶೀರುದ್ದೀನ್ ಆಲಿಯಾ ರವರು ಪ್ರಾಸ್ತಾವಿಕ ಮತ್ತು ಸ್ವಾಗತ ನೆರವೇರಿಸಿ ಕಾರ್ಯಕ್ರಮ ನಿರೂಪಿಸಿದರು.












