ನ್ಯೂಯಾರ್ಕ್ ಸೆನೆಟ್ ಚುನಾವಣೆಯಲ್ಲಿ ಆಯ್ಕೆಯಾದ ಫೆಲಸ್ತೀನಿ ಮೂಲದ ಕವಾಸ್

0
371

ಸನ್ಮಾರ್ಗ ವಾರ್ತೆ

ಇಸ್ರೇಲ್ ಗೆ ಹಣಕಾಸು ನೆರವನ್ನು ನಿಲ್ಲಿಸಬೇಕು ಎಂದು ವಾದಿಸುತ್ತಿದ್ದ ಫೆಲಸ್ತೀನಿ ಮೂಲದ ಅಮೆರಿಕನ್ ಮಹಿಳೆ ಅಬರ್ ಕವಾಸ್ ಅವರು ನ್ಯೂಯಾರ್ಕ್ ರಾಜ್ಯದ ಸೆನೆಟ್ ಸ್ಥಾನಕ್ಕೆ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇವರು ಡೆಮಾಕ್ರೆಟಿಕ್ ಪಕ್ಷದಿಂದ ಸ್ಪರ್ಧಿಸಿದ್ದರು. ನ್ಯೂಯಾರ್ಕ್ ಮೇಯರ್ ಮಮ್ದಾನಿ ಬೆಂಬಲದೊಂದಿಗೆ ಇವರು ಸ್ಪರ್ಧಿಸಿದ್ದರು.

ನ್ಯೂಯಾರ್ಕ್ ರಾಜ್ಯದಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾದ ಮೊದಲ ಫೆಲಸ್ತೀನಿ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು.

ಇವರು ನ್ಯೂಯಾರ್ಕ್ ನಗರದಲ್ಲಿ ಫೆಲಸ್ತೀನಿ ಪೋಷಕರಿಗೆ ಜನಿಸಿದವರಾಗಿದ್ದಾರೆ. ಡೆಮಾಕ್ರೆಟಿಕ್ ಪ್ರಾಥಮಿಕ ಚುನಾವಣೆಯಲ್ಲಿ ಗೆದ್ದ ಕವಾಸ್.

ವಲಸೆ ಸುಧಾರಣೆ ಮತ್ತು ನ್ಯೂಯಾರ್ಕ್ ನಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚನವನ್ನು ಪರಿಹರಿಸುವುದನ್ನು ತಮ್ಮ ಪ್ರಚಾರದ ಉದ್ದಕ್ಕೂ ಪ್ರಮುಖ ವಿಷಯವಾಗಿ ಆರಿಸಿಕೊಂಡಿದ್ದರು.