ಸನ್ಮಾರ್ಗ ವಾರ್ತೆ
ಪಾಕಿಸ್ತಾನದ ಜಿಯೋ ನ್ಯೂಸ್ ದೂರದರ್ಶನ ಚಾನೆಲ್ ಅನ್ನು 15 ದಿನಗಳವರೆಗೆ ಪಾಕಿಸ್ತಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ನಿಷೇಧಿಸಿದೆ. ಮೊಹರಂ ತಿಂಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ವಿಷಯದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸಾರವಾದ ಕಾರ್ಯಕ್ರಮದಲ್ಲಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಸಾಮರಸ್ಯವನ್ನು ಭಂಗಗೊಳಿಸುವ ದೃಶ್ಯಗಳಿವೆ ಎಂದು ಪ್ರಾಧಿಕಾರ ಹೇಳಿದೆ.
ಆದರೆ ಜಿಯೋ ನ್ಯೂಸ್ ಈ ಕಾರ್ಯಕ್ರಮವನ್ನು ತಪ್ಪಾಗಿ ಪ್ರಸಾರ ಮಾಡಲಾಗಿದೆ ಮತ್ತು ಅದು ಚಾನೆಲ್ ನ ಸಂಪಾದಕ ನಿಲುವು ಅಲ್ಲ ಎಂದು ಸ್ಪಷ್ಟಪಡಿಸಿದೆ.
ಜಿಯೋ ನ್ಯೂಸ್ ಪ್ರಸಾರ ಮಾಡಿದ ದೃಶ್ಯಗಳು ಇರಾಕ್ ಮತ್ತು ಪಶ್ಚಿಮದಲ್ಲಿ ಕೆಲವು ಜನರು ನಡೆಸುವ ಆಚರಣೆಗಳ ಭಾಗವಾಗಿದ್ದು ಅದು ಧಾರ್ಮಿಕ ದೃಷ್ಟಿಕೋನವನ್ನು ಬೆಂಬಲಿಸಲು ಅಲ್ಲ, ಆದರೆ ಸ್ಥಳೀಯ ಪದ್ಧತಿಗಳನ್ನು ತೋರಿಸಲು ಮಾತ್ರ ಎಂದು ಚಾನಲ್ ವಿವರಿಸಿದೆ.
ಚಾನೆಲ್ ತನ್ನ ಎಲ್ಲಾ ವೇದಿಕೆಗಳಿಂದ ದೃಶ್ಯಗಳನ್ನು ತೆಗೆದುಹಾಕಿದೆ. ಚಾನೆಲ್ ಸಂಪಾದಕೀಯ ನಿಲುವಿನಲ್ಲಿ ಜಾಗರೂಕರಾಗಿರಲು ವಿಫಲವಾಗಿದೆ ಎಂದು ತಿಳಿಸಿದ ಪ್ರಾಧಿಕಾರವು ಆಂತರಿಕ ತನಿಖೆಗೆ ಆದೇಶಿಸಿದೆ.












