ಸನ್ಮಾರ್ಗ ವಾರ್ತೆ
ಉಮರ್ ಖಾಲಿದ್ ವಿಚಾರಣೆ ಇಲ್ಲದೆ ಇಷ್ಟು ದಿನ ಜೈಲಲ್ಲಿರುವುದು ಏಕೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಶ್ನಿಸಿದ್ದಾರೆ. ಉಮರ್ ಖಾಲಿದ್ ನಿಜವಾಗಿಯೂ ಭಯೋತ್ಪಾದನೆಯನ್ನು ಪ್ರಚೋದಿಸಿದ್ದರು ಎಂದಾದರೆ ಅದನ್ನು ನ್ಯಾಯಾಲಯದಲ್ಲಿ ಏಕೆ ಸಾಬೀತುಪಡಿಸಬಾರದು ಎಂದು ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಉಮರ್ ಖಾಲಿದ್ ಇಷ್ಟು ದಿನ ಏಕೆ ಜೈಲಲ್ಲಿದ್ದಾರೆ ಎಂದು ತಿಳಿದುಕೊಳ್ಳುವ ಹಕ್ಕು ಭಾರತೀಯರಿಗೆ ಇದೆ. ಅಪರಾಧದ ಆರೋಪ ಹೊತ್ತಿರುವ ಯಾವುದೇ ಭಾರತೀಯ ನಾಗರಿಕನ ಮೂಲಭೂತ ಹಕ್ಕಾದ ನ್ಯಾಯಯುತ ವಿಚಾರಣೆಯ ಹಕ್ಕನ್ನು ಅವರಿಗೆ ಏಕೆ ನಿರಾಕರಿಸಲಾಗಿದೆ? ಕಾನೂನು ಬದ್ಧವಾಗಿ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಅವಕಾಶವಿಲ್ಲದೆ ಆರು ವರ್ಷಗಳ ಕಾಲ ಜೈಲಲ್ಲಿ ಇರಿಸುವುದು ನ್ಯಾಯದ ಅಣಕ ಮತ್ತು ನಮ್ಮ ಪ್ರಜಾಪ್ರಭುತ್ವದ ಮೇಲಿನ ಕಳಂಕ. ಏಕೆ ಎಂದು ತಿಳಿಯುವ ಹಕ್ಕು ಭಾರತೀಯರಿಗೆ ಇದೆ ಎಂದು ನಾನು ಭಾವಿಸುತ್ತೇನೆ ಎಂದವರು ಹೇಳಿದ್ದಾರೆ.












