ಸನ್ಮಾರ್ಗ ಜು. 19, 2019
ಇಸ್ಲಾಮಾಬಾದ್, ಜು. 19: ಕುಲ್‍ಭೂಷಣ್ ಜಾಧವ್ ರಿಗೆ ರಾಜತಾಂತ್ರಿಕ ಸಹಾಯ ನೀಡಲು ಪಾಕಿಸ್ತಾನ ನಿರ್ಧರಿಸಿದೆ. ಅಂತಾರಾಷ್ಟ್ರೀಯ ಕೋರ್ಟಿನ ತೀರ್ಪನ್ನು ಗೌರವಿಸಿ ಪಾಕಿಸ್ತಾನ ಈ ಹೆಜ್ಜೆ ಇಟ್ಟಿದೆ. ಪಾಕಿಸ್ತಾನದ ಕಾನೂನಿನ ಪ್ರಕಾರ ಸಹಾಯವನ್ನು ಕುಲ್‍ಭೂಷಣ್‍ರಿಗೆ ನೀಡಲಾಗುವುದು ಎಂದು ಪಾಕಿಸ್ತಾನದ ವಿದೇಶ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ವಿಯೆನ್ನ ಕರಾರಿನ ಪ್ರಕಾರ ರಾಜತಾಂತ್ರಿಕ ಸಹಾಯ ಪಡೆಯುವ ಅರ್ಹತೆ ಕುಲ್‍ಭೂಷಣ್ ಜಾಧವ್‍ರಿಗಿದೆ ಎಂದು ಅಂತಾರಾಷ್ಟ್ರೀಯ ಕೋರ್ಟು ತೀರ್ಪಿನಲ್ಲಿ ತಿಳಿಸಿತ್ತು. ಈ ತೀರ್ಪನ್ನು ಮನ್ನಿಸಿ ಕುಲ್‍ಭೂಷಣ್‍ರಿಗೆ ರಾಜತಾಂತ್ರಿಕ ನೆರವನ್ನು ಪಾಕಿಸ್ತಾನ ಒದಗಿಸಲಿದೆ. ಈ ರೀತಿ ಯಾವೆಲ್ಲ ಸಹಾಯ ಬೇಕೆನ್ನುವುದನ್ನು ಕುಲ್‍ಭೂಷಣ್ ತಿಳಿಸಿದ್ದಾರೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ. ಕುಲ್‍ಭೂಷಣ್ ಜಾಧವ್ ಪ್ರಕರಣದಲ್ಲಿ ಕಾನೂನು ಪ್ರಕಾರ ಮುಂದುವರಿಯುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈ ಹಿಂದೆಯೇ ಹೇಳಿದ್ದಾರೆ. ಇದರ ಬೆನ್ನಿಗೆ ಪಾಕಿಸ್ತಾನ ಹೊಸ ಕ್ರಮ ಜಾರಿಗೊಳಿಸುತ್ತಿದೆ.
2017 ಎಪ್ರಿಲ್‍ನಲ್ಲಿ 49 ವರ್ಷದ ಜಾಧವ್‍ಗೆ ಪಾಕಿಸ್ತಾನ ಕೋರ್ಟು ಮರಣದಂಡನೆ ಶಿಕ್ಷೆ ತೀರ್ಪು ನೀಡಿತ್ತು. ಇದಕ್ಕೆ ಅಂತಾರಾಷ್ಟ್ರೀಯ ಕೋರ್ಟು ತಡೆಯಾಜ್ಞೆ ನೀಡಿದೆ.












