ಸನ್ಮಾರ್ಗ ವಾರ್ತೆ
ಮಾನವನ ಮೆದುಳಿಗೆ ಸಮಾನವಾದ ಅಥವಾ ಅದಕ್ಕಿಂತಲೂ ಹೆಚ್ಚಿನ ಆಲೋಚನಾ ಸಾಮರ್ಥ್ಯ ಹೊಂದಿರುವ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ತಂತ್ರಜ್ಞಾನವು ಕೆಲವೇ ವರ್ಷಗಳಲ್ಲಿ ನಿಜವಾಗಲಿದೆ ಎಂದು ಗೂಗಲ್ ಡೀಪ್ ಮೈಂಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೆಮಿಸ್ ಅಸ್ಸಾಬಿಸ್ ಎಚ್ಚರಿಸಿದ್ದಾರೆ.
ನಾವು ಈಗ ಮಾನವ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕ ಘಟ್ಟದಲ್ಲಿದ್ದೇವೆ. ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ಅನ್ನು ಮಾನವೀಯತೆಯ ಒಳಿತಿಗಾಗಿ ಬಳಸುವುದನ್ನು ಖಚಿತಪಡಿಸಿಕೊಳ್ಳಲು ತುರ್ತು ಸುರಕ್ಷತಾ ಕ್ರಮಗಳ ಅಗತ್ಯವಿದೆ ಎಂದವರು ಹೇಳಿದ್ದಾರೆ.
ಕಳೆದ ಜೂನ್ ನಲ್ಲಿ ಇವರು ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ವಾಸ್ತವವಾಗಲು ಕೇವಲ ಮೂರರಿಂದ ನಾಲ್ಕು ವರ್ಷಗಳು ಮಾತ್ರ ಬೇಕಾಗಬಹುದು ಎಂದು ಹೇಳಿದ್ದರು.
ಪ್ರಸ್ತುತ ಅತ್ಯಾಧುನಿಕ ಎಐ ಮಾದರಿಗಳು ಸೈಬರ್ ಭದ್ರತೆಗೆ ಪ್ರಮುಖ ಸವಾಲನ್ನು ಒಡ್ದುತ್ತವೆ. ಅವು ಮತ್ತಷ್ಟು ಅಭಿವೃದ್ಧಿ ಹೊಂದುತ್ತಿದ್ದಂತೆಯೇ ಪರಮಾಣು ಮತ್ತು ಜೈವಿಕ ಬೆದರಿಕೆಗಳು ಸೇರಿದಂತೆ ಹಲವು ಬೆದರಿಕೆಗಳು ಎದುರಾಗಬಹುದು ಎಂದವರು ಹೇಳಿದ್ದಾರೆ.












