‘ಜುನೈದ್‌ ಜತೆ ವಿದ್ಯಾರ್ಥಿಗಳು ನಿಲ್ಲಲಿದ್ದಾರೆ, ಬೆದರಿಕೆಗಳ ವಿರುದ್ಧ ಒಟ್ಟಾಗಿ ಹೋರಾಡಲಿದ್ದೇವೆ’: ನೇಹಾ ಬೋರಾ ಬೆಂಬಲ

0
224

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸಿಜೆಪಿ ಪ್ರತಿಭಟನಾ ಸ್ಥಳದಲ್ಲಿ ಆಹಾರ ವಿತರಿಸುತ್ತಿದ್ದ ಪ್ರಮುಖ ಸ್ವಯಂಸೇವಕ ಮೊಹಮ್ಮದ್ ಜುನೈದ್‌ ಅವರ ಪರವಾಗಿ ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಬೆಂಬಲ ವ್ಯಕ್ತಪಡಿಸಿ ಮುಂದೆ ಬಂದಿದ್ದಾರೆ.

ಎಡಪಕ್ಷದ ವಿದ್ಯಾರ್ಥಿ ಸಂಘಟನೆ ‘ಐಸಾ’ದ ಅಧ್ಯಕ್ಷರೂ ಆಗಿರುವ ನೇಹಾ ಅವರು, ಮೊಹಮ್ಮದ್ ಜುನೈದ್ ಅವರೊಂದಿಗಿನ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಾ, “ಈ ದೇಶದ ವಿದ್ಯಾರ್ಥಿಗಳು ಜುನೈದ್ ಜತೆಗಿದ್ದಾರೆ. ಪೊಲೀಸರ ದಬ್ಬಾಳಿಕೆ ಮತ್ತು ಬೆದರಿಕೆಯ ಪ್ರತಿಯೊಂದು ಯತ್ನದ ವಿರುದ್ಧ ವಿದ್ಯಾರ್ಥಿ ಚಳುವಳಿವು ಒಟ್ಟಾಗಿ ನಿಂತು ಹೋರಾಡಲಿದೆ” ಎಂದು ಬರೆದಿದ್ದಾರೆ.

ಉತ್ತರ ಪ್ರದೇಶದ ಗಾಝಿಯಾಬಾದ್ ಮೂಲದ ಮೊಹಮ್ಮದ್ ಜುನೈದ್ ಅವರನ್ನು ಈ ಮೊದಲು ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಜುಲೈ 24ರ ರಾತ್ರಿ ಪೊಲೀಸರು ಅವರನ್ನು ಕರೆದೊಯ್ದಿದ್ದರು. ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿ ಕರೆದೊಯ್ದು ಮರುದಿನ ಉತ್ತರಾಖಂಡದಲ್ಲಿ ಬಿಡಲಾಗಿತ್ತು ಎಂದು ಜುನೈದ್ ತಿಳಿಸಿದ್ದರು. ಪ್ರತಿಭಟನಾಕಾರರಿಗೆ ಆಹಾರ ವಿತರಿಸಲು ಹಣ ಎಲ್ಲಿಂದ ಬಂತು ಎಂದು ಪೊಲೀಸರು ತಮ್ಮನ್ನು ಪ್ರಶ್ನಿಸಿದ್ದಾಗಿ ಜುನೈದ್ ಹೇಳಿದ್ದರು.

ಪೊಲೀಸರು ತನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಜುನೈದ್ ಅವರ ಕುಟುಂಬವೂ ಮುಂದೆ ಬಂದಿದೆ. ಜುನೈದ್ ಅವರ ತಂದೆ ಮುಸ್ತಫಾ ಅವರನ್ನು ವಶಕ್ಕೆ ಪಡೆದು, ಅವರ ಬ್ಯಾಂಕ್ ಪಾಸ್‌ಬುಕ್ ಮತ್ತು ಪಾನ್‌ ಕಾರ್ಡ್ ಅನ್ನು ಕಸಿದುಕೊಳ್ಳಲಾಗಿತ್ತು. ದೀರ್ಘಕಾಲದ ವಿಚಾರಣೆಯ ನಂತರ ಮುಸ್ತಫಾ ಅವರನ್ನು ಬಿಡುಗಡೆ ಮಾಡಲಾಯಿತು. ಪೊಲೀಸರು ಮೀರತ್‌ನಲ್ಲಿರುವ ತಮ್ಮ ಸಂಬಂಧಿಕರನ್ನೂ ವಿಚಾರಣೆ ನಡೆಸಿದ್ದರು ಎಂದು ಜುನೈದ್ ಹೇಳಿದ್ದರು. ಕಾಂಗ್ರೆಸ್ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್‌ಗಡಿ ಅವರು ಜುನೈದ್ ಅವರನ್ನು ಭೇಟಿ ಮಾಡಿ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು.

https://www.facebook.com/100000928536693/videos/pcb.38004893569124786/997570306588003?cft[0]=AZYKOnlVeYNf3zvKnMgSvVN1KPyxxLOe7M30AziC1MxkSN_LyDo57clBAob2uRG82GRrdGHxw4AHhC1yVgyAozA3JruxNygTWtx7ef7HsJBd6Tv8mMb7EAVULvcLoQW7BBb5dP6XCFf0EhItzIJ756TBsRKuYXJbwsgfbuHDvEtDLw&tn=*b0H-R
https://www.facebook.com/Neowsi/posts/38004893569124786?ref=embed_post
https://www.facebook.com/100000928536693/videos/pcb.38004893569124786/997570306588003?cft[0]=AZYKOnlVeYNf3zvKnMgSvVN1KPyxxLOe7M30AziC1MxkSN_LyDo57clBAob2uRG82GRrdGHxw4AHhC1yVgyAozA3JruxNygTWtx7ef7HsJBd6Tv8mMb7EAVULvcLoQW7BBb5dP6XCFf0EhItzIJ756TBsRKuYXJbwsgfbuHDvEtDLw&tn=*b0H-R