ಗಾಝಾ ಸಿಟಿ, ಜು.22: ಅಂತಾರಾಷ್ಟ್ರೀಯ ಮಟ್ಟದಿಂದ, ಫೆಲಸ್ತೀನಿಯರ ಕಡೆಯಿಂದ ಬಂದ ಪ್ರತಿರೋಧವನ್ನು ಲೆಕ್ಕಿಸದೆ ಫೆಲಸ್ತೀನಿಯರ ನೂರಾರು ಮನೆಗಳನ್ನು ಕೆಡವಲು ಇಸ್ರೇಲಿನ ಸೇನೆ ಸಿದ್ಧವಾಗಿದೆ. ಸೋಮವಾರ ಬುಲ್ಡೋಝರ್ ಗಳು ಮತ್ತು ನೂರಾರು ಸೈನಿಕರು ಮತ್ತು ಪೊಲೀಸರು ಫೆಲಸ್ತೀನ್ ಗ್ರಾಮಗಳಿಗೆ ಬಂದಿದ್ದಾರೆ. ಇಸ್ರೇಲ್_ಫೆಲಸ್ತೀನ್ ಗಡಿ ಗೋಡೆಯ ಸಮೀಪದಲ್ಲಿರುವ ವಾದಿ ಅಲ್ ಹುಮ್ಮಸ್ ಎಂಬಲ್ಲಿರುವ ಫೆಲಸ್ತೀನಿಯರ ಮನೆಗಳನ್ನು ಕೆಡವಲು ಆರಂಭಿಸಿದ್ದಾರೆ. ಈ ಮನೆಗಳನ್ನು ಕೆಡವಲು ಇಸ್ರೇಲ್ ಸುಪ್ರಿಂಕೋರ್ಟು ಅದೇಶ ನೀಡಿತ್ತು. ಮನೆಯನ್ನು ಕೆಡುವುವ ಕೊನೆಯ ಗಡು ಸೋಮವಾರಕ್ಕೆ ಆಗಿತ್ತು.
ಇಸ್ರೇಲಿನ ಕ್ರಮ ಗಡಿಭಾಗದ ಫೆಲಸ್ತೀನ್ ಗ್ರಾಮಗಳನ್ನು ಅತಿಕ್ರಮಿಸುವ ಉದ್ದೇಶವನ್ನು ಹೊಂದಿದೆ. ಇದು ಇತರ ನಗರಗಳಿಗೂ ವ್ಯಾಪಿಸಲು ಅನುವಾಗಬಹುದು. ಫೆಲಸ್ತೀನ್ನ ಭೂಮಿಯಲ್ಲಿ ಇಸ್ರೇಲ್ ನಡೆಸುವ ಎಲ್ಲ ಅತಿಕ್ರಮಗಳು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಮತ್ತು ಕಾನೂನು ಬಾಹಿರ ಕೂಡ ಆಗಿದೆ.












