ಸನ್ಮಾರ್ಗ ವಾರ್ತೆ
ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹೆಸರು ಕೈಬಿಟ್ಟಿರುವುದನ್ನು ಮತ್ತು ಮಸೀದಿಗಳ ಧ್ವನಿವರ್ಧಕ ತೆರವಿಗೆ ವಿರೋಧಿಸಿ ಜಮಿಯತ್-ಎ-ಉಲೆಮಾದ ಪಶ್ಚಿಮ ಬಂಗಾಳ ಘಟಕವು ರಾಜಾಬಜಾರ್‌ನಿಂದ ಮೌಲಾಲಿಯವರೆಗೆ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿತು. ರಾಜ್ಯ ಅಧ್ಯಕ್ಷ ಮೌಲಾನಾ ಸಿದ್ದಿಕ್‌ಉಲ್ಲಾ ಚೌಧರಿ ನೇತೃತ್ವದಲ್ಲಿ ನಡೆದ ಈ ಮೆರವಣಿಗೆಯಲ್ಲಿ ಆರ್‌ಎಸ್‌ಎಸ್ ರಾಜಕೀಯ ನಾಟಕವಾಡುತ್ತಿದೆ ಎಂದು ಆರೋಪಿಸಲಾಯಿತು.
ಆರಂಭದಲ್ಲಿ ಪೊಲೀಸರು ಅನುಮತಿ ನಿರಾಕರಿಸಿದಾಗ ಸಂಘಟನೆ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರು, ಸಂವಿಧಾನದ 19ನೇ ವಿಧಿಯಡಿ ಪ್ರತಿಭಟಿಸುವುದು ಸಂರಕ್ಷಿತ ಹಕ್ಕು ಎಂದು ಅಭಿಪ್ರಾಯಪಟ್ಟು ಮೆರವಣಿಗೆಗೆ ಅನುಮತಿ ನೀಡಿದರು. ಆದರೆ ಭಾಗವಹಿಸುವವರ ಸಂಖ್ಯೆಯನ್ನು 750ಕ್ಕೆ ಮಿತಿಗೊಳಿಸುವುದು, ಧ್ವನಿವರ್ಧಕಗಳ ಬದಲು ಕೈಯಲ್ಲಿ ಹಿಡಿಯುವ ಮೈಕ್ ಬಳಸುವುದು ಮತ್ತು ಸಂಚಾರಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದು ಸೇರಿದಂತೆ ಷರತ್ತುಗಳನ್ನು ವಿಧಿಸಿದರು.
ಇದೇ ವೇಳೆ, ಸ್ಥಳೀಯ ಪೊಲೀಸ್ ಠಾಣೆಗಳ ಮೌಖಿಕ ಸೂಚನೆಯಂತೆ ರಾಜ್ಯದ ಹಲವು ಮಸೀದಿಗಳಲ್ಲಿ ಅಝಾನ್‌ಗಾಗಿ ಬಳಸುತ್ತಿದ್ದ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ವಕ್ಫ್ ಮಂಡಳಿಯ ದಾಖಲೆಗಳ ಪ್ರಕಾರ ರಾಜ್ಯದಲ್ಲಿ ಸುಮಾರು 62,000ಕ್ಕೂ ಅಧಿಕ ಮಸೀದಿಗಳಿವೆ.












