ಆಗಸ್ಟ್‌ 22: ಮುಜೀಬುರ್ರಹ್ಮಾನ್ ಕಾಸರಗೋಡಿಗೆ

0
376

ಸನ್ಮಾರ್ಗ ವಾರ್ತೆ

ಕಾಸರಗೋಡು: ಜಮಾತ್ ಇಸ್ಲಾಮಿ ಹಿಂದ್ ಕೇರಳ ರಾಜ್ಯ ಅಧ್ಯಕ್ಷ ಮುಜೀಬುರ್ರಹ್ಮಾನ್ ಆಗಸ್ಟ್ 27ರಂದು ಕಾಸರಗೋಡಿಗೆ ಆಗಮಿಸಲಿದ್ದಾರೆ.

ಆ ದಿನ ಸಂಜೆ 4:30ಕ್ಕೆ ಹೊಸ ಬಸ್ ಸ್ಟ್ಯಾಂಡ್ ಬಳಿಯ ಆರ್ ಕೆ ಮಾಲ್ ನಲ್ಲಿ ನಡೆಯುವ ಸೀರತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ವೆಳಿಚ್ಚಮಾಣ್ ತಿರುದೂದರ್ ಎಂಬ ವಿಷಯದಲ್ಲಿ ನಡೆಯುವ ಈ ಸಾರ್ವಜನಿಕ ಸಮಾವೇಶದಲ್ಲಿ ಶಿಹಾಬ್ ಪೂಕೋಟರ್ ಉಪಾಧ್ಯಕ್ಷರು (ಜಮಾತೆ ಇಸ್ಲಾಮಿ ಹಿಂದ್ ಕೇರಳ) ಪಿಎಂ ಅಬ್ದುಲ್ ಸಲಾಂ ಮೌಲವಿ ಅಲ್ ಖಾಸಿಮಿ, ಅಬ್ದುಲ್ ಹಕೀಮ್ ನದ್ವಿ, ಅಫೀದಾ ಅಹ್ಮದ್, ಪಿ ಎಸ್ ಅಬ್ದುಲ್ಲ ಕುಂಞಿ ಮುಂತಾದವರು ಭಾಗವಹಿಸಲಿದ್ದಾರೆ. ಎಂದು ಜಮಾಅತೆ ಇಸ್ಲಾಮಿ ಹಿಂದ್ ಕಾಸರಗೋಡು ಪ್ರಕಟಣೆಯಲ್ಲಿ ತಿಳಿಸಿದೆ.