“ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ)”: ಬೆಂಗಳೂರಿನಲ್ಲಿ ಆ. 26ರಂದು ಬೃಹತ್ ಪ್ರವಾದಿ ಸಂದೇಶ ಸಮಾವೇಶ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ

0
481

ಸನ್ಮಾರ್ಗ ವಾರ್ತೆ

ಬೆಂಗಳೂರು: “ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ)” ಎಂಬ ರಾಜ್ಯವ್ಯಾಪಿ ಅಭಿಯಾನದ ಅಂಗವಾಗಿ ಆಗಸ್ಟ್ 26ರಂದು ಬೆಂಗಳೂರಿನಲ್ಲಿ ಬೃಹತ್ ಪ್ರವಾದಿ ಸಂದೇಶ ಸಮಾವೇಶ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಆಗಸ್ಟ್ 26ರಂದು ಸಂಜೆ 7 ಗಂಟೆಗೆ ಮತ್ತಿಕೆರೆಯ ಜೆ.ಪಿ. ಪಾರ್ಕ್ ಆಟದ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಜಮಾಅತೆ ಇಸ್ಲಾಮೀ ಹಿಂದ್, ಯಶವಂತಪುರ ಘಟಕದ ವತಿಯಿಂದ ಸಮಾವೇಶ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ವಿಶ್ವಕಲ್ಯಾಣ ಮಿಷನ್, ಬಸವಗಂಗೋತ್ರಿ ಆಧ್ಯಾತ್ಮಿಕ ಕೇಂದ್ರದ ಸದ್ಗುರು ಶ್ರೀ ಬಸವಯೋಗಿ ಸ್ವಾಮೀಜಿ, ಮತ್ತಿಕೆರೆಯ ಸಂತ ಜೋಸೆಫರ ಮಲಾಂಕರ ಕ್ಯಾಥೊಲಿಕ್ ಚರ್ಚ್‌ನ ಧರ್ಮಗುರು ರೆ. ಫಾ. ಹೇನ್ಸ್ ಜಾನ್, ಚಿಂತಕ ಹಾಗೂ ವಾಗ್ಮಿ ಜನಾಬ್ ಅಕ್ಬರ್ ಅಲಿ ಉಡುಪಿ, ಸಾಹಿತಿ ಹಾಗೂ ಗ್ರಂಥಕರ್ತ ಶ್ರೀ ಯೋಗೇಶ್ ಮಾಸ್ಟರ್ ಮತ್ತು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ಕಾರ್ಯದರ್ಶಿ ಜನಾಬ್ ಯೂಸುಫ್ ಕನ್ನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಆಗಸ್ಟ್ 26ರಿಂದ ಸೆಪ್ಟೆಂಬರ್ 6ರವರೆಗೆ ನಡೆಯಲಿರುವ ರಾಜ್ಯವ್ಯಾಪಿ “ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)” ಅಭಿಯಾನದ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ಸಾರ್ವಜನಿಕರಿಗೆ ಆದರದ ಸ್ವಾಗತ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ: 9916437349 / 9686423267